ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಪ್ಯಾರಿಸ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ಫೋಟೊಗಳನ್ನು ಅವರು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ಯಾರಿಸ್ ಪ್ರವಾಸದ ಸಂದರ್ಭದಲ್ಲಿ ರಶ್ಮಿಕಾ ಅವರು ವಿವಿಧ ತಾಣಗಳಿಗೆ ಭೇಟಿ ನೀಡಿದ್ದಾರೆ. ಬಳಿಕ ಅಲ್ಲಿ ತೆಗೆದುಕೊಂಡಿರುವ ಸೆಲ್ಫಿ ಮತ್ತು ರೆಸ್ಟೊರೆಂಟ್‌ಗಳ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಪ್ಯಾರಿಸ್ ಪ್ರವಾಸದ ಸಂದರ್ಭದಲ್ಲಿ ರತ್ನಶಾಸ್ತ್ರಜ್ಞ ಥಾಮಸ್ ಬಿಜು ಅವರನ್ನು ರಶ್ಮಿಕಾ ಭೇಟಿ ಮಾಡಿದ್ದು, ಫೋಟೊ ಹಂಚಿಕೊಂಡಿದ್ದಾರೆ.
ಪ್ಯಾರಿಸ್‌ನ ಸುಂದರ ಪ್ರವಾಸಿ ತಾಣಗಳ ಫೋಟೊಗಳನ್ನು ಕೂಡ ರಶ್ಮಿಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಲ್ಲಿಯೂ ವರ್ಕೌಟ್ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.