ಶುಕ್ರವಾರ, ಆಗಸ್ಟ್ 12, 2022
22 °C

ನೇರಳ ಬಣ್ಣದ ಆಕರ್ಷಕ ಉಡುಗೆ ತೊಟ್ಟು ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Rashmika Mandanna Instagram

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರಗಳಲ್ಲಿ ನಟಿಸುವುದು ಕಡಿಮೆಯಾದರೂ, ಸದಾ ಸುದ್ದಿಯಲ್ಲಿರುತ್ತಾರೆ.

ರಶ್ಮಿಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೊ ಒಂದು ಈಗ ಸದ್ದು ಮಾಡುತ್ತಿದೆ. ಅದಕ್ಕೆ ನೀಡಿರುವ ಅಡಿಬರಹವೂ ಹಲವರು ಚರ್ಚೆ ಮಾಡುವಂತೆ ಮಾಡಿದೆ.

ರಶ್ಮಿಕಾ ಧರಿಸಿರುವ ನೇರಳೆ ಬಣ್ಣದ ಬೇಸಿಗೆ ಉಡುಗೆಯ ಬಗ್ಗೆಯೂ ಅಭಿಮಾನಿಗಳು ಚರ್ಚಿಸಿದ್ದು, ಇಂಟರ್‌ನೆಟ್‌ನಲ್ಲಿ ಹವಾ ಸೃಷ್ಟಿಸಿದೆ.

ರಶ್ಮಿಕಾ ಪೋಸ್ಟ್‌ಗೆ ಕನ್ನಡ ನಟಿ ಆಶಿಕಾ ರಂಗನಾಥ್, ಓಹೋ ಹಾಟ್‌ನೆಟ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಆನಂದ್ ಶರ್ಮಾ, ಗಾರ್ಜಿಯಸ್ ಎಂದು ಹೃದಯದ ಎಮೋಜಿ ಬಳಸಿ ಕಮೆಂಟ್ ಮಾಡಿದ್ದಾರೆ.

ಉಳಿದಂತೆ ರಶ್ಮಿಕಾ ಅಭಿಮಾನಿಗಳು ಕಮೆಂಟ್ ಮೂಲಕ ನಟಿಯ ಚೆಲುವನ್ನು ಕೊಂಡಾಡಿದ್ದಾರೆ. ರಶ್ಮಿಕಾ ಪೋಸ್ಟ್‌ಗೆ 31 ಲಕ್ಷಕ್ಕೂ ಅಧಿಕ ಲೈಕ್ಸ್ ಕೂಡ ಬಂದಿವೆ.

ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲೂ ರಶ್ಮಿಕಾ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು