ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಖಾನ್ ಮುಂದಿನ ಚಿತ್ರ ‘ಸಿಕಂದರ್‌’ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ

Published 9 ಮೇ 2024, 8:44 IST
Last Updated 9 ಮೇ 2024, 8:44 IST
ಅಕ್ಷರ ಗಾತ್ರ

ಮುಂಬೈ: ‘ಪುಷ್ಪ’, ‘ಅನಿಮಲ್’ ಚಿತ್ರಗಳ ಖ್ಯಾತಿಯ ಕನ್ನಡದ ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಬಾಲಿವುಡ್ ಚಿತ್ರ ‘ಸಿಕಂದರ್‌’ನಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಘಜನಿ’.‘ಹಾಲಿ ಡೇ’ ಚಿತ್ರಗಳ ಖ್ಯಾತಿಯ ಎ.ಆರ್. ಮುರುಗದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಜಿದ್ ನಾಡಿಯಾವಾಲಾ ಚಿತ್ರ ನಿರ್ಮಾಣ ಮಾಡುತ್ತಿದ್ದು, ಮುಂದಿನ ವರ್ಷದ ರಂಜಾನ್‌ ಹಬ್ಬಕ್ಕೆ ಬಿಡುಗಡೆಯ ಗುರಿ ಹೊಂದಲಾಗಿದೆ.

‘ಸಲ್ಮಾನ್ ಖಾನ್ ಜೊತೆಗೆ ಸಿಕಂದರ್ ಚಿತ್ರದಲ್ಲಿ ನಟಿಸಲು ಫ್ಯಾಬುಲಸ್ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸ್ವಾಗತ ಕೋರುತ್ತೇವೆ. ಈ ಅದ್ಬುತ ಜೋಡಿಯ ಸ್ಕ್ರೀನ್ ಮ್ಯಾಜಿಕ್ ಅನ್ನು 2025ರ ಈದ್‌ ಸಂದರ್ಭದಲ್ಲಿ ಅನಾವರಣಗೊಳಿಸಲಿದ್ದೇವೆ’ ಎಂದು ಚಿತ್ರ ನಿರ್ಮಾಣ ಸಂಸ್ಥೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದೆ

ರಶ್ಮಿಕಾ ಮಂದಣ್ನ ಸಹ ಸಿಕಂದರ್ ಚಿತ್ರದ ಭಾಗವಾಗಲು ಕಾತರಳಾಗಿದ್ದೇನೆ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ಮುಂದಿನ ಚಿತ್ರದ ಅಪ್ಡೇಟ್ ಬಗ್ಗೆ ಬಹಳ ಸಮಯದಿಂದ ಕೇಳುತ್ತಿದ್ದೀರಿ. ಇಲ್ಲಿದೆ ನೋಡಿ ಸರ್‌ಪ್ರೈಸ್‌.. ಸಿಕಂದರ್ ಚಿತ್ರದ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT