ನಟ ವಿಜಯ್ ದೇವರಕೊಂಡ ಜೊತೆ ಮದುವೆಯನ್ನು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಖಚಿತಪಡಿಸಿದ್ದು, ಈ ಮೂಲಕ ವದಂತಿಗೆ ತೆರೆಬಿದ್ದಿದೆ.

ಕಳೆದ ಕೆಲವು ತಿಂಗಳಿಂದ ರಶ್ಮಿಕಾ–ವಿಜಯ್ ಮದುವೆಯ ಬಗ್ಗೆ ಗಾಳಿಸುದ್ದಿ ಇತ್ತು. ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡರೂ ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ರಶ್ಮಿಕಾ, ‘ನೀವು ಪ್ರೀತಿಯಿಂದ ನಮಗೆ ‘ವಿರೋಶ್’ ಎಂಬ ಹೆಸರು ನೀಡಿದಿರಿ. ಇದೇ ಹೆಸರಿನಲ್ಲಿ ನಾವಿಂದು ಒಂದಾಗುತ್ತಿದ್ದೇವೆ. ಹೀಗಾಗಿ ನಾವು ಇದನ್ನು ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಕರೆಯುತ್ತಿದ್ದೇವೆ. ನಿಮ್ಮ ಪ್ರೀತಿಗೆ ಋಣಿ. ನೀವು ಸದಾ ನಮ್ಮ ಪಯಣದ ಒಂದು ಭಾಗ’ ಎಂದು ಉಲ್ಲೇಖಿಸಿದ್ದಾರೆ.

2017ರಲ್ಲಿ ತೆಲುಗಿನ ‘ಗೀತ ಗೋವಿಂದಂ’ ಸಿನಿಮಾ ಸೆಟ್ನಲ್ಲಿ ಭೇಟಿಯಾದ ವಿಜಯ್–ರಶ್ಮಿಕಾ ಬಳಿಕ 2019ರಲ್ಲಿ ‘ಡಿಯರ್ ಕಾಮ್ರೆಡ್’ನಲ್ಲೂ ಜೊತೆಯಾಗಿ ನಟಿಸಿದ್ದರು. ಇನ್ನಷ್ಟೇ ಬಿಡುಗಡೆಯಾಗಬೇಕಿರುವ ವಿಜಯ್ ನಟನೆಯ 14ನೇ ಸಿನಿಮಾ ‘ರಣಬಾಲಿ’ಯಲ್ಲೂ ಈ ಜೋಡಿ ಜೊತೆಯಾಗಿ ನಟಿಸಿದೆ. ಮದುವೆಯ ದಿನಾಂಕ ಹಾಗೂ ಸ್ಥಳವನ್ನು ರಶ್ಮಿಕಾ ಅಧಿಕೃತವಾಗಿ ಘೋಷಿಸಿಲ್ಲ. ಫೆ.26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ.

ಕೊಡಗಿನ ವಿರಾಜಪೇಟೆಯ ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟವರು. ಕನ್ನಡದಲ್ಲಿ ‘ಅಂಜನಿಪುತ್ರ’, ‘ಯಜಮಾನ’, ‘ಚಮಕ್’ ‘ಪೊಗರು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಚಲೋ’ ಸಿನಿಮಾದ ಮೂಲಕ ಅವರು ಟಾಲಿವುಡ್ ಪ್ರವೇಶಿಸಿದರು. ತೆಲುಗಿನಲ್ಲೇ ಹೆಚ್ಚಿನ ಸಿನಿಮಾಗಳಿಗೆ ರಶ್ಮಿಕಾ ಬಣ್ಣಹಚ್ಚಿದ್ದಾರೆ. ಅಲ್ಲು ಅರ್ಜುನ್ ನಟನೆಯ ತೆಲುಗು ಸಿನಿಮಾ ‘ಪುಷ್ಪ’ ಸರಣಿ ಹಾಗೂ ರಣ್ಬೀರ್ ಕಪೂರ್ ನಟನೆಯ ಹಿಂದಿ ಸಿನಿಮಾ ‘ಆ್ಯನಿಮಲ್’ ರಶ್ಮಿಕಾ ಬಣ್ಣದ ಬದುಕಿಗೆ ದೊಡ್ಡ ತಿರುವು ನೀಡಿದ ಸಿನಿಮಾಗಳು

ರಶ್ಮಿಕಾ ಪೋಸ್ಟ್ನಲ್ಲಿ ಏನಿದೆ?

ಅಭಿಮಾನಿಗಳನ್ನು ಉದ್ದೇಶಿಸಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ’ನಾವು ಏನಾದರೂ ಹೊಸದನ್ನು ಮಾಡುವ ಮೊದಲು, ಹೊಸದನ್ನು ಆರಿಸಿಕೊಳ್ಳುವ ಮೊದಲು ನೀವು ನಮ್ಮೊಂದಿಗೆ ಇರುತ್ತೀರಿ. ನೀವೇ ಪ್ರೀತಿಯಿಂದ ನಮಗೆ ‘VIROSH’ (ವಿರೋಶ್) ಎಂದು ಕರೆದಿದ್ದೀರಿ. ಆದ್ದರಿಂದ ಇಂದು, ನಾವು ಒಂದಾಗುತ್ತಿರುವ ಈ ಶುಭ ಸಂದರ್ಭಕ್ಕೆ ಅದೇ ಹೆಸರನ್ನು ಇಡುತ್ತಿದ್ದೇವೆ. ನಾವೀಗ ಇದನ್ನು 'The Wedding of VIROSH’ ಎಂದು ಕರೆಯಲು ಬಯಸುತ್ತೇವೆ, ನಮಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ನೀವು ಎಂದಿಗೂ ನಮ್ಮ ಬದುಕಿನ ಭಾಗವಾಗಿರುತ್ತೀರಿ’ ಎಂದು ಬರೆದುಕೊಂಡಿದ್ದಾರೆ.

'VIROSH' ಎಂದರೆ…

ಅಭಿಮಾನಿಗಳು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಹೆಸರನ್ನು ಸೇರಿಸಿ ವಿರೋಶ್- ‘VIROSH’ ಎಂದು ಕರೆದಿದ್ದಾರೆ. ಅಂದರೆ VIjay + ROSHmika  ಎಂದರ್ಥವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.