ಸಪೂರ ಸೊಂಟ ಪಡೆಯಬೇಕು ಎಂಬುದು ಬಹುತೇಕ ಹೆಂಗಳೆಯರ ಕನಸು. ಹೊಟ್ಟೆ ಸಣ್ಣದಾಗಿ ಮತ್ತು ಸೊಂಟ ಸುಂದರವಾಗಿ ಕಾಣಲು ಅವರು ಪ್ರತಿದಿನ ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಕೆಲವರು ಯೋಗಕ್ಕೆ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಜಿಮ್ಗಳಲ್ಲಿ ಬೆವರು ಸುರಿಸುತ್ತಾರೆ. ಯೂಟ್ಯೂಬ್ನಲ್ಲಿ ಸಿಗುವ ಪುಕ್ಕಟೆ ಸಲಹೆ ಕೇಳಿ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡದೆ ಅನಾರೋಗ್ಯಕ್ಕೆ ತುತ್ತಾಗುವವರೂ ಇದ್ದಾರೆ.

ಶಾರ್ಟ್ ಟಾಪ್ ಮತ್ತು ಜೀನ್ಸ್ನ ಅಂದ ಹೆಚ್ಚಿಸುವ ಶಕ್ತಿ ಇರುವುದು ಸೊಂಟಕ್ಕೆ ಮಾತ್ರ. ಅದರಲ್ಲೂ ಸೀರೆಯಲ್ಲಿ ಸುಂದರವಾಗಿ ಸೊಂಟ ತೋರಿಸಲು ಸಿನಿಮಾ ಮಂದಿ ಖರ್ಚು ಮಾಡುವ ಬುದ್ಧಿಗೆ ಕೊನೆಯಿಲ್ಲ. ಕನ್ನಡದ ‘ಚಂದು’ ಚಿತ್ರದಲ್ಲಿ ನಟ ಸುದೀಪ್ ‘ಸೊಂಟದ ವಿಷ್ಯ ಬೇಡವೋ ಶಿಷ್ಯ; ಸೊಂಟಕ್ಕಿಂತ ವಾಸಿ ಕಣೋ ಗುಂಡಿನ ದಾಸ್ಯ’ ಎಂದು ಹಾಡಿ ಕುಣಿದಿದ್ದರು. ಈ ಹಾಡಿನ ಹಿಂದಿರುವ ಅರ್ಥ ಅರಿತಿದ್ದರೂ ಅದರ ಬಗ್ಗೆ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಎಳ್ಳಷ್ಟೂ ತಲೆಕೆಡಿಸಿಕೊಳ್ಳುವುದಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲಾ ಹೀರೊಯಿನ್ಗಳ ಸೊಂಟವನ್ನೇ ಸಿನಿಮಾದ ಬಂಡವಾಳ ಮಾಡಿಕೊಳ್ಳುವಲ್ಲಿ ಅವರು ಸದಾ ಮುಂದಿದ್ದಾರೆ.

ಸಪೂರ ಸೊಂಟವೇ ಈಗ ತೆಲುಗಿನ ‘ಭೀಷ್ಮ’ ಸಿನಿಮಾಕ್ಕೆ ಪ್ರಚಾರದ ವಸ್ತುವಾಗಿದೆಯಂತೆ. ಅರೇ... ಸುಂದರವಾದ ಸೊಂಟ ತೋರಿಸಿದ ನಟಿ ಯಾರು? ಎಂದು ಹೆಚ್ಚೇನು ತಲೆಕೆಡಿಸಿಕೊಳ್ಳಬೇಡಿ. ಅವರು ಬೇರಾರೂ ಅಲ್ಲ; ಕನ್ನಡತಿ ರಶ್ಮಿಕಾ ಮಂದಣ್ಣ! ಆಕೆಯ ಬಳುಕುವ ಸೊಂಟ ಹಿಡಿಯಲು ಹೊರಟಿರುವುದು ನಾಯಕ ನಟ ನಿತಿನ್.

‘ಭೀಷ್ಮ’ ಟಾಲಿವುಡ್ನಲ್ಲಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರ. ಈ ಸಿನಿಮಾ ನಿರ್ಮಿಸುತ್ತಿರುವುದು ಸಿತಾರಾ ಎಂಟರ್ಟೈನ್ಮೆಂಟ್ಸ್. ಇದೇ ಮೊದಲ ಬಾರಿಗೆ ರಶ್ಮಿಕಾ ಜೊತೆಗೆ ನಿತಿನ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿತಿನ್ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ರಶ್ಮಿಕಾ ಅವರ ಸೊಂಟ ಹಿಡಿಯಲು ಯತ್ನಿಸುತ್ತಿರುವ ಫೋಟೊ ವೈರಲ್ ಆಗಿದೆ. ಮತ್ತೊಂದೆಡೆ ಸಿನಿಮಾ ನಿರ್ಮಾಪಕರು ರಶ್ಮಿಕಾ ಅವರ ಸೊಂಟವನ್ನೇ ಪ್ರಚಾರದ ಸಾಧನವಾಗಿ ಬಳಸಿಕೊಂಡಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಅಕ್ಟೋಬರ್ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಬಿಡುಗಡೆಗೊಂಡಿದ್ದ ಪೋಸ್ಟರ್ನಲ್ಲೂ ರಶ್ಮಿಕಾ ಅವರ ಸೊಂಟವೇ ಹೈಲೈಟ್ಸ್ ಆಗಿತ್ತು. ನವೆಂಬರ್ನಲ್ಲಿ ಚಿತ್ರತಂಡ ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿಯೂ ರಶ್ಮಿಕಾ ಅವರ ಸೊಂಟ ಹಿಡಿಯಲು ನಿತಿನ್ ಯತ್ನಿಸುವುದನ್ನೇ ತೋರಿಸಲಾಗಿತ್ತು. ಬಹಳಷ್ಟು ಯುವಜನರು ಈ ಟೀಸರ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದು ಉಂಟು.

ಆದರೆ, ನಿತಿನ್ ಮತ್ತು ರಶ್ಮಿಕಾ ಅವರು ಕೂಡ ಈ ಟೀಕೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜೊತೆಗೆ, ರಶ್ಮಿಕಾ ಅವರ ಸೊಂಟವನ್ನೇ ಸಿನಿಮಾದ ಪ್ರಚಾರ ಸಾಧನವಾಗಿ ಬಳಸಿಕೊಳ್ಳುವುದನ್ನು ನಿರ್ಮಾಪಕರು ಕೂಡ ಬಿಟ್ಟಿಲ್ಲ.

ಕೆಲವು ದಿನಗಳ ಹಿಂದೆ ಹಾಡೊಂದರ ಚಿತ್ರೀಕರಣಕ್ಕಾಗಿ ನಿತಿನ್ ಮತ್ತು ರಶ್ಮಿಕಾ ಜೋಡಿ ಇಟಲಿಗೆ ತೆರಳಿತ್ತು. ಈ ಇಬ್ಬರೂ ಅಲ್ಲಿನ ಪೊಸಿಟೊನಾ ನದಿಯ ದಂಡೆ ಮೇಲೆ ಮಾಡಿದ್ದ ನೃತ್ಯಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಮೆಚ್ಚುಗೆ ಸೂಚಿಸಿದ್ದರು.

ಹೆಬಾ ಪಟೇಲ್, ಅನಂತ್ನಾಗ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ವೆಂಕಿ ಕುದುಮುಲ.ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು. ಫೆ. 21ರಂದು ಥಿಯೇಟರ್ಗೆ ಲಗ್ಗೆ ಇಡಲಿದೆ.

‘ಭೀಷ್ಮ’ ಚಿತ್ರದಲ್ಲಿ ನಿತಿನ್ ಮತ್ತು ರಶ್ಮಿಕಾ ಮಂದಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.