ಜಡೇಶ್ ಕುಮಾರ್ ನಿರ್ದೇಶನದ ನಟ ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರತಂಡವು, ಚಿತ್ರದ ನಾಯಕಿಯನ್ನು ಸ್ಕಿಟ್ ಮುಖಾಂತರ ವಿನೂತನವಾಗಿ ಪರಿಚಯಿಸಿದೆ. ‘ಅಮ್ಮ ಐ ಲವ್ ಯು’, ‘ಪಡ್ಡೆ ಹುಲಿ’, ‘ಜಂಟಲ್ಮನ್’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಿಶ್ವಿಕಾ ನಾಯ್ಡು ಇದೀಗ ಶರಣ್‌ಗೆ ಜೋಡಿಯಾಗಿದ್ದಾರೆ.

ನಿಶ್ವಿಕಾ ಅವರ ಜನ್ಮದಿನದ ಸಂದರ್ಭದಲ್ಲೇ ನಾಯಕಿಯನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆಯಾಗಿದೆ. ‘ಶರಣ್ ಈ ಚಿತ್ರದಲ್ಲಿ ಒಬ್ಬ ದೈಹಿಕ ಶಿಕ್ಷಕನ ಪಾತ್ರವಹಿಸುತ್ತಿದ್ದಾರೆ. ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ‘ಸೂಜಿ’ ಹೆಸರಿನ ಪಾತ್ರ ಮಾಡಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995ರಲ್ಲಿ ನಡೆಯುವಂಥದ್ದು. ಈಗಾಗಲೇ ಚಿತ್ರದ ಶೇ 60 ಚಿತ್ರೀಕರಣ ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣ ಸದ್ಯದ ಕೋವಿಡ್ ಲಾಕ್‌ಡೌನ್ ಮುಗಿದ ನಂತರ ಮಾಡಲು ನಿರ್ಧರಿಸಲಾಗಿದೆ’ ಎಂದು ಜಡೇಶ್ ಕುಮಾರ್ ತಿಳಿಸಿದ್ದಾರೆ.

‘ನಾಯಕಿಯನ್ನು ಆಯ್ಕೆ ಮಾಡುವ ಸ್ಕಿಟ್ ತಯಾರು ಮಾಡುವುದೂ ಕೂಡ ಬಹಳ ಮಜವಾದ ಕೆಲಸವಾಗಿತ್ತು. ನಿಶ್ವಿಕಾ ಅವರು ತುಂಬಾ ಒಳ್ಳೆಯ ನಟಿ. ನಮ್ಮಿಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಶರಣ್ ಹೇಳಿದ್ದಾರೆ.

30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ಗುರುಶಿಷ್ಯರು ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ನಿಶ್ವಿಕಾ ಅವರನ್ನು ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆಯ ಬಗ್ಗೆ ಹಾಸ್ಯಮಯವಾದ ಒಂದು ವಿಡಿಯೊವೊಂದನ್ನು ರಚಿಸಲಾಗಿದೆ. ನಟಿಯ ಆಯ್ಕೆಯ ಕುರಿತು ಶರಣ್, ಜಡೇಶ್ ಹಾಗೂ ತರುಣ್ ಸುಧೀರ್ ಮಾತುಕತೆ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.