ಕಿಸ್

ಎ.ಪಿ. ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ಬಿಡುಗಡೆಯಾಗುತ್ತಿದೆ. ವಿರಾಟ್ ಹಾಗೂ ಶ್ರೀಲೀಲಾ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.ಇದು ಪ್ರೀತಿಸುವ ಹೃದಯಗಳಿಗೆ ತಯಾರಾಗಿರುವ ಸಿನಿಮಾ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅರ್ಜುನ್ ಶೆಟ್ಟಿ ಅವರ ಛಾಯಾಗ್ರಹಣವಿದೆ. ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜಿಸಿದ್ದಾರೆ. ಕೆ. ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ದೀಪು ಎಸ್. ಕುಮಾರ್ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನವಿದೆ. ಚಿಕ್ಕಣ್ಣ, ಅವಿನಾಶ್, ಮನೀಷ್ ಶೆಟ್ಟಿ, ಸುಂದರ್, ದತ್ತಣ್ಣ, ಭಾರ್ಗವಿ ನಾರಾಯಣ್ ತಾರಾಗಣದಲ್ಲಿದ್ದಾರೆ.

ಗೀತಾ

ಎಸ್.ಎಸ್. ಫಿಲಂಸ್ ಹಾಗೂ ಗೋಲ್ಡನ್ ಮೂವೀಸ್‌ನಡಿ ಸೈಯದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ನಿರ್ಮಿಸಿರುವ ‘ಗೀತಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ನಟ ಗಣೇಶ್ ನಾಯಕರಾಗಿದ್ದಾರೆ. ವಿಜಯ್ ನಾಗೇಂದ್ರ ಈ ಚಿತ್ರ ನಿರ್ದೇಶಿಸಿದ್ದಾರೆ. ನಾಗೇಂದ್ರ ಬಿ.ಎಂ. ಸಂಭಾಷಣೆ ಹೊಸೆದಿದ್ದಾರೆ. ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಜ್ಞಾನೇಶ್ ಬಿ. ಮಠದ್ ಅವರ ಸಂಕಲನವಿದೆ. ಶಿವಕುಮಾರ್ ಮತ್ತು ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನವಿದೆ. ವಿಜಯ್ ಮಾಸ್ಟರ್ ಹಾಗೂ ವಿನೋದ್ ಅವರು ಸಾಹಸ ನಿರ್ದೇಶಿಸಿದ್ದಾರೆ. ಭೂಷಣ ಅವರ ನೃತ್ಯ ನಿರ್ದೇಶನವಿದೆ. ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್, ಶಾನ್ವಿ ಶ್ರೀವಾಸ್ತವ, ಸುಧಾರಾಣಿ, ದೇವರಾಜ್, ರಂಗಾಯಣ ರಘು, ಅಚ್ಯುತಕುಮಾರ್ ತಾರಾಬಳಗದಲ್ಲಿದ್ದಾರೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ

ವಸುಂಧರ ಕೃತಿಕ್ ಫಿಲಂಸ್ ಲಾಂಛನದಡಿ ನಿರ್ಮಾಣಗೊಂಡಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾ ತೆರೆ ಕಾಣುತ್ತಿದೆ. ಇದಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.ರಾಮಚಂದ್ರ ಈ ಚಿತ್ರ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯ ನೊಗವನ್ನೂ ಅವರೇ ಹೊತ್ತಿದ್ದಾರೆ. ಛಾಯಾಗ್ರಹಣ ಪರಮೇಶ್ ಸಿ.ಎಂ. ಅವರದು. ನೊಬಿನ್ ಪೌಲ್ ಸಂಗೀತ ನೀಡಿದ್ದಾರೆ. ಸಂಕಲನ ಉಗ್ರಂ ಶ್ರೀಕಾಂತ್ ಅವರದು. ಮದನ್ ಹರಿಣಿ ನೃತ್ಯ ಸಂಯೋಜಿಸಿದ್ದಾರೆ. ಸಾಹಸ ನಿರ್ದೇಶಿಸಿರುವುದು ಸೂಪರ್ ಜೋನ್ಸ್. ತಾರಾಗಣದಲ್ಲಿ ಸಂಚಾರಿ ವಿಜಯ್, ಮಯೂರಿ, ಶೋಭರಾಜ್, ‘ದುನಿಯಾ’ ರಶ್ಮಿ, ಅಚ್ಯುತ್ ಕುಮಾರ್, ಭರತ್ ಸಾಗರ್, ಗೌತಮ್ ಇದ್ದಾರೆ.

ನವರಾತ್ರಿ

ದುಷ್ಟಶಕ್ತಿ ವಿರುದ್ಧ ಹೋರಾಡುವ ಕಥಾವಸ್ತು ಹೊಂದಿರುವ ‘ನವರಾತ್ರಿ’ ಚಿತ್ರ ತೆರೆ ಕಾಣುತ್ತಿದೆ. ಲಕ್ಷ್ಮಿಕಾಂತ್ ಈ ಚಿತ್ರ ನಿರ್ದೇಶಿಸಿದ್ದಾರೆ. ರೆಡ್ಡಿ ವಂಶಿ ಬಂಡವಾಳ ಹೂಡಿದ್ದಾರೆ. ನರೇಶ್ ಕುಮಾರನ್ ಅವರ ಸಂಗೀತವಿದೆ. ತ್ರಿವಿಕ್ರಮ್, ಹೃದಯ ಆವಂತಿ, ಶಿವ ಡಮಂಜು, ಕಾರ್ತಿಕ್, ಪ್ರಣಯಮೂರ್ತಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.