ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

81ನೇ ವೆನಿಸ್‌ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’ ಪ್ರದರ್ಶನ

Published : 5 ಸೆಪ್ಟೆಂಬರ್ 2024, 5:56 IST
Last Updated : 5 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ನವದೆಹಲಿ: ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ‘ಘಟಶ್ರಾದ್ಧ’ ಸಿನಿಮಾ 81ನೇ ವೆನಿಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು ಎಂದು ಫಿಲ್ಮ್ ಹೆರಿಟೇಜ್ ಫೌಂಡೇಶನ್ ತಿಳಿಸಿದೆ.

ಯು.ಆರ್‌.ಅನಂತಮೂರ್ತಿ ಅವರ ಕಥೆ ಆಧರಿಸಿದ, 108 ನಿಮಿಷಗಳ ಈ ಚಿತ್ರವನ್ನು ಸೆಪ್ಟೆಂಬರ್ 4 ರಂದು ವೆನಿಸ್ ಕ್ಲಾಸಿಕ್ಸ್ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಈ ಮೂಲಕ ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ‘ಘಟಶ್ರಾದ್ಧ’ ಭಾಜನವಾಗಿದೆ.

ಈ ಸಿನಿಮಾವನ್ನು ವಿಶ್ವಸಿನಿಮಾದ ಒಂದು ಕ್ಲಾಸಿಕ್‌ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸಲಾಗಿದೆ. ನಿರ್ದೇಶಕರಾದ ಗಿರೀಶ ಕಾಸರವಳ್ಳಿ ಹಾಗೂ ನಿರ್ಮಾಪಕ ಶಿವೇಂದ್ರ ಸಿಂಗ್‌ ಡುಂಗರಪುರ ಪ್ರದರ್ಶನದ ವೇಳೆ ಹಾಜರಿದ್ದರು.

ವೆನಿಸ್ ಚಲನಚಿತ್ರೋತ್ಸವವು ಆಗಸ್ಟ್ 28ರಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 7ರವರೆಗೆ ನಡೆಯಲಿದೆ .

ಯು.ಆರ್‌.ಅನಂತಮೂರ್ತಿ ಅವರ ಕಥೆ ಆಧರಿಸಿದ, ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ್ದ ‘ಘಟಶ್ರಾದ್ಧ’ ಸಿನಿಮಾ 1978ರಲ್ಲಿ ತೆರೆಕಂಡಿತ್ತು. ಇದು ಗಿರೀಶ ಅವರ ಪ್ರಥಮ ಚಿತ್ರ. ಚಿತ್ರವನ್ನು ಸದಾನಂದ ಸುವರ್ಣ ನಿರ್ಮಾಣ ಮಾಡಿದ್ದರು. ಭಾರತೀಯ ಸಿನಿಮಾದ ಶತಮಾನೋತ್ಸವ ಸಂದರ್ಭದಲ್ಲಿ ಶತಮಾನದ 20 ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿತವಾದ ‘ಘಟಶ್ರಾದ್ಧ’ ಅನೇಕ ಅಂತರರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT