ಆರ್‌ಜಿವಿ ಮಿಸ್ಸಿಂಗ್...ಇದು ರಾಮ್‌ಗೋಪಾಲ್ ವರ್ಮಾ ಮುಂದಿನ ಚಿತ್ರ!

ನಿರ್ದೇಶಕ ರಾಮ್‌ಗೋಪಾಲ್ ತಮ್ಮ ಮುಂದಿನ ಚಿತ್ರದ ಟೈಟಲ್ ಘೋಷಣೆ ಮಾಡಿದ್ದಾರೆ. ಆ ಚಿತ್ರದ ಹೆಸರು ‘ಆರ್‌ಜಿವಿ ಮಿಸ್ಸಿಂಗ್’.
ರಾಮ್‌ಗೋಪಾಲ್ ವರ್ಮಾ ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತಿಲ್ಲ. ಬದಲಾಗಿ ಒಟ್ಟಿಗೆ ಒಂದಿಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳನ್ನು ಆರ್‌ಜಿವಿ ವರ್ಲ್ಡ್ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಇನ್ನು ಕೆಲವು ಯೋಜನೆಯ ಹಂತದಲ್ಲಿವೆ. ಇನ್ನೂ ಕೆಲಸವು ಶೂಟಿಂಗ್ ನಡೆಯುತ್ತಿವೆ. ಒಂದಷ್ಟು ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಪ್ರತಿ ವಾರಕ್ಕೆ ಒಂದರಂತೆ ಸಿನಿಮಾಗಳನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ಆರ್‌ಜಿವಿ.
ಥ್ರಿಲ್ಲರ್ ಸಿನಿಮಾವಾಗಿರುವ ಆರ್‌ಜಿವಿ ಮಿಸ್ಸಿಂಗ್‌ನಲ್ಲಿ ರಾಮ್ ಗೋಪಾಲ್ ವರ್ಮಾ ಕೂಡ ನಟಿಸಲಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಬಗ್ಗೆ ಸದ್ಯದಲ್ಲೇ ಆರ್‌ಜಿವಿ ತಿಳಿಸಲಿದ್ದು ಹಿಂದಿನ ಸಿನಿಮಾಗಳಂತೆ ಇದು ಕಡಿಮೆ ಅವಧಿ ಸಿನಿಮಾ ಅಲ್ಲವಂತೆ. ಈ ಚಿತ್ರದ ಅವಧಿ ಒಂದು ಗಂಟೆ ಎನ್ನಲಾಗುತ್ತಿದೆ.
ಈಗಾಗಲೇ ವಾರಕ್ಕೊಂದು ಸಿನಿಮಾ ಮಾಡುವ ಯೋಚನೆಯಲ್ಲಿರುವ ಆರ್‌ಜಿವಿ ಅನೇಕ ಪರಿಕಲ್ಪನೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಆರ್‌ಜಿವಿ ಮಿಸ್ಸಿಂಗ್ ಕೂಡ ಒಂದು.
ಈ ಎಲ್ಲವನ್ನು ನೋಡುತ್ತಿದ್ದರೆ ಸದ್ಯಕ್ಕೆ ಆರ್‌ಜಿವಿ ಯಾವುದೇ ಚಲನಚಿತ್ರ ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡುವುದು ಅನುಮಾನವಾಗಿದೆ.
ಮೂಲಗಳ ಪ್ರಕಾರ ಆರ್‌ಜಿವಿ ಥ್ರಿಲ್ಲರ್ ಹಾಗೂ ವಯಸ್ಕರ ಸಿನಿಮಾಗಳನ್ನೇ ಹೆಚ್ಚು ಹೆಚ್ಚು ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.