ಮಂಗಳವಾರ, ಸೆಪ್ಟೆಂಬರ್ 29, 2020
22 °C

ಸುಶಾಂತ್ ನಂಬರ್ ಬ್ಲಾಕ್ ಮಾಡಿದ್ದ ರಿಯಾ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಸುಶಾಂತ್ ಸಾವಿನ ದಿನದಿಂದಲೂ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಕೇಳಿ ಬರುತ್ತಲೇ ಇದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ವಾರದ ಮೊದಲು ರಿಯಾ ತಾವು ಸುಶಾಂತ್ ಜೊತೆ ವಾಸವಿದ್ದ ಫ್ಲ್ಯಾಟ್‌ ಅನ್ನು ತೊರೆದು ಹೋಗಿದ್ದರು. 

ಆ ದಿನವೇ ರಿಯಾ ಸುಶಾಂತ್ ಮೊಬೈಲ್‌ ನಂಬರ ಅನ್ನು ಬ್ಲಾಕ್ ಮಾಡಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಅಲ್ಲದೇ ಸುಶಾಂತ್ ಕಾಲ್ ರೆಕಾರ್ಡ್‌ನ ‌ಮಾಹಿತಿಯ ಪ್ರಕಾರವೂ ಜೂನ್‌ 8 ರಿಂದ ಜೂನ್‌ 14ರವರೆಗೆ ಸುಶಾಂತ್ ಹಾಗೂ ರಿಯಾ ಮೊಬೈಲ್ ಮೂಲಕ ಯಾವುದೇ ಮಾತುಕತೆ ನಡೆಸಿಲ್ಲ. ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೂನ್ 8 ರಂದು ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಸುಶಾಂತ್ ನಂಬರ್ ಅನ್ನು ರಿಯಾ ಯಾವ ಕಾರಣಕ್ಕೆ ಬ್ಲಾಕ್‌ ಮಾಡಿದ್ದಾರೆ, ಆಕೆ ಸುಶಾಂತ್‌ರನ್ನು ಬಿಟ್ಟು ಹೋಗಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. 

ಸುಶಾಂತ್ ಸಾವಿನ ಕುರಿತು ತನಿಖೆಯನ್ನು ಬುಧವಾರ ಸಿಬಿಐಗೆ ವರ್ಗಾಯಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು