ಮಂಗಳವಾರ, ಆಗಸ್ಟ್ 9, 2022
20 °C
ಇನ್ಸ್ಟಾಗ್ರಾಮ್‌ನಲ್ಲಿ ರಿಯಾ ಚಕ್ರವರ್ತಿ ಫೋಸ್ಟ್‌

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷ: ಗೆಳತಿ ರಿಯಾ ಭಾವುಕ ಫೋಸ್ಟ್

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಇಂದಿಗೆ (ಜೂನ್ 14) ಒಂದು ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿ ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಫೋಸ್ಟ್‌ ಒಂದನ್ನು ಹಂಚಿಕೊಂಡಿದ್ಧಾರೆ.

‘ನೀನು ಈ ಜಗತ್ತಿನಲ್ಲಿ ಇನ್ಮುಂದೆ ಇಲ್ಲ ಎಂದು ನಂಬುವ ಒಂದು ಕ್ಷಣವೂ ನನ್ನಲ್ಲಿಲ್ಲ. ಸಮಯ ಎಲ್ಲವನ್ನೂ ಮರೆಸುತ್ತದೆ. ಆದರೆ, ನನ್ನ ಸಮಯ ಹಾಗೂ ಎಲ್ಲವೂ ನೀನೆ. ನೀನು ನನ್ನನ್ನು ಕಾಪಾಡುವ ದೇವರು ಎಂದು ನನಗೆ ತಿಳಿದಿದೆ. ಚಂದ್ರನಿಂದ ಟೆಲಿಸ್ಕೋಪ್ ಇಟ್ಟು ನೀನು ನನ್ನನ್ನು ನೋಡುತ್ತಿದ್ದೀಯಾ‘ ಎಂದು ರಿಯಾ ಸುಶಾಂತ್ ಫೋಟೊದೊಂದಿಗೆ ತಮ್ಮ ಮನದಾಳವನ್ನು ಬರೆದುಕೊಂಡಿದ್ಧಾರೆ.

‘ನೀನು ಇಲ್ಲದೇ ನನ್ನ ಜೀವನ ಇಲ್ಲ. ನನ್ನ ಜೀವನದ ಅರ್ಥವನ್ನು ನಿನ್ನೊಂದಿಗೆ ತೆಗೆದುಕೊಂಡು ಹೋಗಿದ್ದೀಯಾ. ಈ ಶೂನ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನ ಗೈರು ನನಗೆ ಸದಾ ಕಾಡುತ್ತದೆ. ಆದರೂ ನೀನು ನನ್ನೊಂದಿಗೆ ಇದ್ದಿಯಾ ಎಂದೆನಿಸುತ್ತದೆ. ಎಲ್ಲ ಕಡೆ ನಿನ್ನನ್ನೇ ನೋಡುತ್ತಿರುತ್ತೇನೆ, ಐ ಮಿಸ್ ಯು, ಮೈ ಬೆಸ್ಟ್‌ ಫ್ರೆಂಡ್, ಮೈ ಮ್ಯಾನ್, ಮೈ ಲವ್‘ ಎಂದು ರಿಯಾ ಸುಶಾಂತ್ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ಧಾರೆ.

 

ಜೂನ್ 14, 2020 ರಂದು ಮುಂಬೈನ ಬಾಂದ್ರಾದ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸುಶಾಂತ್ ಕುಟುಂಬದವರು ರಿಯಾ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣದ ತನಿಖೆ ಸಿಬಿಐ ಕೈ ಬಂದಿದ್ದಾಗ ಸಿಬಿಐ ರಿಯಾಳನ್ನು ಬಂಧಿಸಿ 28 ದಿನ ಜೈಲಿಗೆ ಕಳುಹಿಸಿತ್ತು. ಸದ್ಯ ರಿಯಾ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು