ರಕ್ಷಿತ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಮತ್ತೆ ಹುಟ್ಟಿ ಬರುತ್ತಿದ್ದಾನೆ ‘ರಿಚರ್ಡ್ ಆ್ಯಂಟನಿ’ ಶೀರ್ಷಿಕೆಯನ್ನು ವಿವರಿಸುವ ಪುಟ್ಟ ಟ್ರೇಲರ್ನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿದೆ.

ಉಳಿದವರು ಕಂಡಂತೆ ಚಿತ್ರದ ಮುಂದಿನ ಭಾಗ ಎಂಬಂತೆ ಅಲ್ಲಲ್ಲಿ ಕೆಲವು ತುಣುಕುಗಳನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ರಿಚರ್ಡ್ ಆ್ಯಂಟೊನಿಯ ಗೋರಿಯ ಮೇಲಿನ ಕಾಗೆ ಮತ್ತು ಅಚ್ಯುತ್ ಕುಮಾರ್ ಟ್ರೇಲರ್ನ ಪ್ರಧಾನ ಪಾತ್ರಧಾರಿಗಳು. ಉಳಿದವರು ಕಂಡಂತೆ ಚಿತ್ರದಲ್ಲೂ ಕಾಗೆ ಮತ್ತು ಅಚ್ಯುತ್ ಕುಮಾರ್ ಅವರ ಸಂಘರ್ಷ ಕಾಣಬಹುದು.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಟ್ರೇಲರ್ ನಿರ್ಮಾಣದ ಪರಿಯೇ ಚಿತ್ರದ ಮೇಲೆ ನಿರೀಕ್ಷೆ ಹುಟ್ಟುಹಾಕಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಖುಷಿ ಹಂಚಿಕೊಂಡಿರುವ ರಕ್ಷಿತ್, ‘ಮೊದಲು ನಮ್ಮ ಕೆಲಸ ಮಾತಾಡಲಿ. ಉಳಿದವೆಲ್ಲ ನಂತರ... ರಿಚರ್ಡ್ ಆ್ಯಂಟನಿ ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ನಿಮ್ಮ ಪ್ರೀತಿಯ ಆಶೀರ್ವಾದ ಇರಲಿ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.