ಶನಿವಾರ, ಜನವರಿ 23, 2021
25 °C

ರಿಚಾ ಚಡ್ಡಾ ನಟನೆಯ ‘ಮೇಡಂ ಚೀಫ್ ಮಿನಿಸ್ಟರ್‌’ ಜ 22ಕ್ಕೆ ಥಿಯೇಟರ್‌ನಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಚಾ ಚಡ್ಡಾ ನಟನೆಯ, ರಾಜಕಿಯ ಕಥಾಹಂದರವಿರುವ ‘ಮೇಡಂ ಚೀಫ್ ಮಿನಿಸ್ಟರ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಇದೇ 22ಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿದೆ ಚಿತ್ರತಂಡ.

‘ಜಾಲಿ ಎಲ್‌ಎಲ್‌ಬಿ’ ಖ್ಯಾತಿಯ ಸುಭಾಶ್ ಕಪೂರ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಟೀ ಸಿರೀಸ್ ಹಾಗೂ ಕಂಗ್ರಾ ಟಾಕೀಸ್ ನಿರ್ಮಾಣದ ‘ಮೇಡಂ ಚೀಫ್ ಮಿನಿಸ್ಟರ್‌’ನಲ್ಲಿ ಮಾನವ್ ಕೌಲ್‌ ಹಾಗೂ ಸೌರಭ್‌ ಶುಕ್ಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಟೀ ಸಿರೀಸ್ ಸಂಸ್ಥೆ ಚಿತ್ರದ ಫಸ್ಟ್‌ಲುಕ್‌ ಅನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

‘ಮೇಡಂ ಚೀಫ್‌ ಮಿನಿಸ್ಟರ್‌’ ಚಿತ್ರದ ಫಸ್ಟ್‌ಲುಕ್‌ ಅನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ರಾಜಕೀಯ ರಂಗವನ್ನು ಅಲುಗಾಡಿಸುವ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ರಿಚಾ ಚಡ್ಡಾ, ಮಾನವ್‌ ಕೌಲ್‌ ಹಾಗೂ ಸೌರಭ ಶುಕ್ಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾವೂ ಜನವರಿ 22ಕ್ಕೆ ಬಿಡುಗಡೆಯಾಗಲಿದೆ’ ಎಂದು ಟೀ ಸಿರೀಸ್ ಟ್ವೀಟ್ ಮಾಡಿದೆ.

ಇದರಲ್ಲಿ ಅಕ್ಷಯ್ ಒಬೆರಾಯ್ ಹಾಗೂ ಶುಭ್ರಾಜ್ಯೋತಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕೊರೊನಾ ನಂತರ ರಿಚಾ ನಟನೆಯ 2ನೇ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಶಕೀಲಾ ಸಿನಿಮಾ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು