ಬುಧವಾರ, ಜನವರಿ 29, 2020
31 °C

ಬಿಟೌನ್‌ಗೆ ರಿಷಿ ಕಪೂರ್‌ ಕಮ್‌ ಬ್ಯಾಕ್‌‘ಶರ್ಮಾಜೀ ನಮ್ಕೀನ್‌’ ಎನ್ನಲಿದ್ದಾರೆ ಜೂಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮೇರಾ ನಾಮ್‌ ಜೋಕರ್‌’ ಚಿತ್ರದ ಮೂಲಕ ದುಃಖದಲ್ಲೂ ಹೇಗೆ ನಗಬೇಕು ಎಂದು ಹೇಳಿಕೊಟ್ಟ ರಿಷಿ ಕಪೂರ್‌, ಕ್ಯಾನ್ಸರ್‌ ಜೊತೆ ಸೆಣಸಾಡಿ, ಈಗ ಹೊಸ ಚಿತ್ರದ ಮೂಲಕ ಬಾಲಿವುಡ್‌ಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ನಾಯಕ ಅವರೇ.

ಶರ್ಮಾಜೀ ರೂಪದಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡಲು ರಿಷಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಷಿಗೆ ಜೊತೆಯಾಗುತ್ತಿರುವವರು ನಟಿ ಜೂಹಿ ಚಾವ್ಲಾ.

‘ಇನಾ ಮೀನಾ ಡಿಕಾ’, ‘ಬೋಲ್‌ ರಾಧಾ ಬೋಲ್’ ಸಿನಿಮಾಗಳಲ್ಲಿ ಮಿಂಚಿದ್ದ ರಿಷಿ ಕಪೂರ್‌ ಮತ್ತು ಜೂಹಿ ಚಾವ್ಲಾ ಜೋಡಿ ಈಗ ‌‘ಶರ್ಮಾಜೀ ನಮ್ಕೀನ್‌’ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ.

ಈ ಸಿನಿಮಾಕ್ಕೆ  ರಿತೇಶ್‌ ಸಿದ್ವಾನಿ ಮಾಲೀಕತ್ವದ ಎಕ್ಸೆಲ್‌ ಎಂಟರ್‌ಟೇನ್‌ಮೆಂಟ್‌ ಬಂಡವಾಳ ಹೂಡಲಿದೆ. ಈ ಬಗ್ಗೆ ಸ್ವತಃ ರಿತೇಶ್‌ ಸಿದ್ವಾನಿ ಸ್ಪಷ್ಟಪಡಿಸಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ಶರ್ಮಾಜೀ ನಮ್ಕೀನ್‌’ ಚಿತ್ರ 2020ರಲ್ಲಿ ತೆರೆಮೇಲೆ ಬರಲಿದೆ.  ಇದು ವಿಶ್ರಾಂತಿ ಬಳಿಕ ರಿಷಿ ಕಪೂರ್‌ ನಟನೆಯ ಮೊದಲ ಸಿನಿಮಾವಾಗಿದ್ದು, ಹಿತೇಶ್‌ ಬಾಟಿಯಾ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.  ಈ ಸಿನಿಮಾ ಬಿಡುಗಡೆಗೂ ಮುನ್ನ ಇಮ್ರಾನ್‌ ಹಸ್ಮೀ ಅಭಿನಯದ ‘ದಿ ಬಾಡಿ‘ ಚಿತ್ರದಲ್ಲೂ ರಿಷಿ ಕಪೂರ್‌ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು