ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rishi kapoor

ADVERTISEMENT

ರಿಷಿ ಕಪೂರ್‌ ಪುಣ್ಯಸ್ಮರಣೆ: ಅಪ್ಪನ ಜೊತೆಗಿನ ಬಾಲ್ಯದ ಚಿತ್ರ ಹಂಚಿಕೊಂಡ ರಿದ್ಧಿಮಾ

ನಟ ರಣಬೀರ್‌ ಕಪೂರ್‌ ಅವರ ಸಹೋದರಿ ರಿದ್ಧಿಮಾ ಕಪೂರ್‌ ಅವರು ತಮ್ಮ ತಂದೆ ರಿಷಿ ಕಪೂರ್‌ ಅವರನ್ನು ನೆನೆದು ಭಾವುಕರಾಗಿದ್ದಾರೆ. ಅಪ್ಪನೊಂದಿಗಿನ ಬಾಲ್ಯದ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ನೆನಪಿನಂಗಳಕ್ಕೆ ಜಾರಿದ್ದಾರೆ.
Last Updated 30 ಏಪ್ರಿಲ್ 2022, 8:56 IST
ರಿಷಿ ಕಪೂರ್‌ ಪುಣ್ಯಸ್ಮರಣೆ: ಅಪ್ಪನ ಜೊತೆಗಿನ ಬಾಲ್ಯದ ಚಿತ್ರ ಹಂಚಿಕೊಂಡ ರಿದ್ಧಿಮಾ

'ಸಂಗಾತಿ ಕಳೆದುಕೊಂಡು ಉಳಿಯವುದು ಕಠಿಣ': ರಿಷಿ ಕಪೂರ್ ನೆನೆದು ಭಾವುಕರಾದ ನೀತು

ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್‌ ಅವರು ಮೃತಪಟ್ಟು ಇಂದಿಗೆ (ಏಪ್ರಿಲ್‌ 30) ಎರಡು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ನೀತು ಕಪೂರ್‌ ಅವರು ಭಾವುಕ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
Last Updated 30 ಏಪ್ರಿಲ್ 2022, 6:13 IST
'ಸಂಗಾತಿ ಕಳೆದುಕೊಂಡು ಉಳಿಯವುದು ಕಠಿಣ': ರಿಷಿ ಕಪೂರ್ ನೆನೆದು ಭಾವುಕರಾದ ನೀತು

ರಣಬೀರ್ ನನ್ನ ಡ್ರೆಸ್ ಕದ್ದು ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದ: ಸಹೋದರಿಯಿಂದ ರಿವೀಲ್

ಕಳೆದ ಭಾನುವಾರ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಕಾಮಿಡಿ ವಿತ್ ಕಪಿಲ್‘ ಕಾರ್ಯಕ್ರಮದಲ್ಲಿ ರಿಷಿ ಕಪೂರ್ ಪತ್ನಿ ಬಾಲಿವುಡ್ ನಟಿ ನೀತು ಕಪೂರ್ ಹಾಗೂ ಅವರ ಮಗಳು ರಿದ್ದಿಮಾ ಕಪೂರ್ ಸಹನಿ ಭಾಗವಹಿಸಿದ್ದರು. ಈ ವೇಳೆ ರಿದ್ದಿಮಾ ಕಪೂರ್, ತಮ್ಮ ಸಹೋದರ ಬಾಲಿವುಡ್ ನಟ ರಣಬೀರ್ ಕಪೂರ್ ಬಗೆಗೆ ಹೇಳಿದ ಸ್ವಾರಸ್ಯಕರ ಸಂಗತಿಗೆ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು. ‘ರಣಬೀರ್ ಕಾಲೇಜ್ ಓದುತ್ತಿರುವಾಗ ನಾನು ಹೊಸದಾಗಿ ಖರೀದಿಸಿದ್ದ ಡ್ರೆಸ್ ಒಂದನ್ನು ಕದ್ದು ತನ್ನ ಗರ್ಲ್ ಫ್ರೆಂಡ್‌ಗೆ ಉಡುಗೊರೆಯಾಗಿ ನೀಡಿದ್ದ. ಅವನು ತುಂಬಾ ಮುಜುಗರ ಸ್ವಭಾವದವನಾಗಿದ್ದ‘ ಎಂದು ರಿದ್ದಿಮಾ ಹೇಳಿದ ಮೇಲೆ ಪ್ರೇಕ್ಷಕರು ಗೊಳ್ಳೆಂದು ನಕ್ಕಿದ್ದರು.
Last Updated 7 ಸೆಪ್ಟೆಂಬರ್ 2021, 14:32 IST
ರಣಬೀರ್ ನನ್ನ ಡ್ರೆಸ್ ಕದ್ದು ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದ: ಸಹೋದರಿಯಿಂದ ರಿವೀಲ್

ಪ್ಲೀಸ್‌ ಪಪ್ಪಾ, ಮರಳಿ ಬಾ...: ರಿಷಿ ಕಪೂರ್‌ ಪುತ್ರಿ ರಿದ್ಧಿಮಾ ಭಾವುಕ ಪೋಸ್ಟ್‌

ಅಪ್ಪಂದಿರ ದಿನಾಚರಣೆಯಂದು ಬಾಲಿವುಡ್‌ ಸೆಲೆಬ್ರಿಟಿಗಳು, ತೀರಿಹೋದ ತಮ್ಮ ಅಪ್ಪನನ್ನು ನೆನಪಿಸಿಕೊಂಡಿದ್ದಾರೆ. ಅಪ್ಪನ ವ್ಯಕ್ತಿತ್ವ, ಆತನ ಜತೆಗಿನ ಒಡನಾಟ, ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಈಚೆಗೆ ಸಾವಿಗೀಡಾದ ಬಾಲಿವುಡ್‌ ನಟ ರಿಷಿ ಕಪೂರ್ ಅವರನ್ನು‌ ಪುತ್ರಿ ರಿದ್ಧಿಮಾ ನೆನಪಿಸಿಕೊಂಡಿದ್ದಾರೆ. ಅಪ್ಪನೊಂದಿಗೆ ಕಳೆದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.
Last Updated 21 ಜೂನ್ 2020, 5:57 IST
ಪ್ಲೀಸ್‌ ಪಪ್ಪಾ, ಮರಳಿ ಬಾ...: ರಿಷಿ ಕಪೂರ್‌ ಪುತ್ರಿ ರಿದ್ಧಿಮಾ ಭಾವುಕ ಪೋಸ್ಟ್‌

ಮೂರು ತಿಂಗಳಲ್ಲಿ ಹತ್ತು ಸಿನಿಮಾ ಕಲಾವಿದರ ಸಾವು !

2020 ಸಿನಿಮಾ ರಂಗಕ್ಕೆ ದುರಂತದ ವರ್ಷ
Last Updated 14 ಜೂನ್ 2020, 9:33 IST
ಮೂರು ತಿಂಗಳಲ್ಲಿ ಹತ್ತು ಸಿನಿಮಾ ಕಲಾವಿದರ ಸಾವು !

‘ಬಾಬ್ಬಿ’ಯಿಂದ ‘ಮುಲ್ಕ್‌’ವರೆಗೆ... ನಟ ರಿಷಿ ಕಪೂರ್ ಪಯಣ

ರಿ ಷಿ ಕಪೂರ್‌..! ಹಿಂದಿ ಚಿತ್ರರಂಗದ ಲವರ್‌ ಬಾಯ್‌, ಚಾಕೊಲೇಟ್‌ ಹೀರೊ, ರೊಮ್ಯಾಂಟಿಕ್‌ ಹೀರೊ, ಆ್ಯಂಗ್ರಿ ಮ್ಯಾನ್‌! ಏನು ಬೇಕಾದರೂ ಕರೆಯಬಹುದು. ಅದಕ್ಕೆ ಕಾರಣಗಳೂ ಇವೆ. ಅಜ್ಜ, ಅಪ್ಪ, ಸೋದರರು ಎಲ್ಲರೂ ಚಿತ್ರರಂಗದಲ್ಲಿ ದುಡಿದವರೇ. ಸಿನಿಮಾ ಕುಟುಂಬದಲ್ಲಿ ಹುಟ್ಟಿ, ಸಿನಿಮಾದೊಂದಿಗೆ ಬೆಳೆದು, ಸಿನಿಮಾದಲ್ಲಿ ನಟಿಸುತ್ತಿರುವ ಕಾಲದಲ್ಲೇ ತೀರಿಕೊಂಡ ರಿಷಿ ಕಪೂರ್‌ ಬಿಟ್ಟು ಹೋದ ನೆನಪುಗಳಿಗೆ ಲೆಕ್ಕವಿಲ್ಲ. ಹಿಂದಿ ಚಿತ್ರರಂಗದಲ್ಲಿ ಸದಾ ನೆನಪಿರುವ ‘ಮುಗುಳ್ನಗೆಯ ಮುದ್ದು ಮುಖ’ ರಿಷಿ ಕಪೂರ್‌ ಅವರದ್ದು.
Last Updated 1 ಮೇ 2020, 6:25 IST
‘ಬಾಬ್ಬಿ’ಯಿಂದ ‘ಮುಲ್ಕ್‌’ವರೆಗೆ... ನಟ ರಿಷಿ ಕಪೂರ್ ಪಯಣ

ರಿಷಿ ಕಪೂರ್‌ ಅಭಿನಯದ ಮರೆಯಲಾಗದ ಐದು ಸಿನಿಮಾಗಳು...

ಬಾಲಿವುಡ್‌ ಅಂಗಳದಲ್ಲಿ ಮರೆಯಲಾಗದ ಸಾಧನೆ, ವ್ಯಕ್ತಿತ್ವ ನೆನಪುಗಳನ್ನು ಬಿಟ್ಟು ಹೋಗಿರುವ ರೊಮ್ಯಾಂಟಿಕ್‌ ಮ್ಯಾನ್‌ ರಿಷಿ ಕಪೂರ್‌ ಅವರ ಬದುಕು ಕೂಡ ಬಣ್ಣದ ಜಗತ್ತಿನಂತೆಯೇ ವರ್ಣರಂಜಿತ.
Last Updated 30 ಏಪ್ರಿಲ್ 2020, 19:13 IST
ರಿಷಿ ಕಪೂರ್‌ ಅಭಿನಯದ ಮರೆಯಲಾಗದ ಐದು ಸಿನಿಮಾಗಳು...
ADVERTISEMENT

ನಟ ರಿಷಿ ಕಪೂರ್‌ನ ಕೊನೆಯ ವಿಡಿಯೊ ಎಂದು ವೈರಲ್ ಆಗಿದ್ದು ಹಳೇ ವಿಡಿಯೊ 

ಬಾಲಿವುಡ್ ನಟ ರಿಷಿ ಕಪೂರ್ ಅವರ ಕೊನೆಯ ವಿಡಿಯೊ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಎರಡು ತಿಂಗಳ ಹಿಂದಿನದ್ದು. ಫೆಬ್ರುವರಿಯಲ್ಲಿಸೋಂಕು ತಗುಲಿದೆಹಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ರೆಕಾರ್ಡ್ ಮಾಡಿದ ವಿಡಿಯೊ ಅದಾಗಿದೆ
Last Updated 30 ಏಪ್ರಿಲ್ 2020, 16:07 IST
ನಟ ರಿಷಿ ಕಪೂರ್‌ನ ಕೊನೆಯ ವಿಡಿಯೊ ಎಂದು ವೈರಲ್ ಆಗಿದ್ದು ಹಳೇ ವಿಡಿಯೊ 

ಮುಂಬೈಯ ಚಂದನ್‌ವಾಡಿ ಸ್ಮಶಾನದಲ್ಲಿ ರಿಷಿ ಕಪೂರ್ ಅಂತ್ಯ ಸಂಸ್ಕಾರ

ಗುರುವಾರ ನಿಧನರಾದ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಅಂತ್ಯ ಸಂಸ್ಕಾರ ದಕ್ಷಿಣ ಮುಂಬೈಯ ಚಂದನ್‌ವಾಡಿ ಸ್ಮಶಾನದಲ್ಲಿ ನಡೆಯಲಿದೆ ಸಹೋದ ರಣ್‌ಧೀರ್ ಕಪೂರ್ ಹೇಳಿದ್ದಾರೆ.
Last Updated 30 ಏಪ್ರಿಲ್ 2020, 11:25 IST
ಮುಂಬೈಯ ಚಂದನ್‌ವಾಡಿ ಸ್ಮಶಾನದಲ್ಲಿ ರಿಷಿ ಕಪೂರ್ ಅಂತ್ಯ ಸಂಸ್ಕಾರ

ಒಂದೇ ಫ್ರೇಮ್‌ನಲ್ಲಿ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್: ಡಿ ಡೇ ದೃಶ್ಯ ವೈರಲ್  

ಈ ಪೈಕಿ 2013ರಲ್ಲಿ ಬಿಡುಗಡೆಯಾದ ಡಿ-ಡೇ ಚಿತ್ರ ದೃಶ್ಯವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.ವಿಶೇಷವೆಂದರೆ ಈ ಚಿತ್ರದಲ್ಲಿ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಜತೆಯಾಗಿ ನಟಿಸಿದ್ದಾರೆ.
Last Updated 30 ಏಪ್ರಿಲ್ 2020, 10:22 IST
ಒಂದೇ ಫ್ರೇಮ್‌ನಲ್ಲಿ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್: ಡಿ ಡೇ ದೃಶ್ಯ ವೈರಲ್  
ADVERTISEMENT
ADVERTISEMENT
ADVERTISEMENT