ಸೋಮವಾರ, ಜೂನ್ 1, 2020
27 °C

ಒಂದೇ ಫ್ರೇಮ್‌ನಲ್ಲಿ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್: ಡಿ ಡೇ ದೃಶ್ಯ ವೈರಲ್  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

D-day

ಮುಂಬೈ: ನಟ ಇರ್ಫಾನ್ ಖಾನ್ ಸಾವಿನ ಬೆನ್ನಲ್ಲೇ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ನಿಧನರಾಗಿದ್ದಾರೆ.ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ನೆಟಿಜನ್‌ಗಳು ರಿಷಿ ಕಪೂರ್‌ ಅವರ ಸಿನಿಮಾದ ಕೆಲವು ದೃಶ್ಯಗಳನ್ನು ಪೋಸ್ಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಈ ಪೈಕಿ 2013ರಲ್ಲಿ ಬಿಡುಗಡೆಯಾದ ಡಿ-ಡೇ ಚಿತ್ರ ದೃಶ್ಯವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಇರ್ಫಾನ್  ಖಾನ್ ಮತ್ತು ರಿಷಿ ಕಪೂರ್ ಜತೆಯಾಗಿ ನಟಿಸಿದ್ದಾರೆ. ರಿಷಿ ಕಪೂರ್ ಮಸೀದಿಗೆ ಬರುವಾಗ ಇರ್ಫಾನ್ ಖಾನ್ ಕುತೂಹಲದಿಂದ ನೋಡಿ ಇದು ಯಾರು ಎಂದು ಕೇಳುತ್ತಿರುವ ದೃಶ್ಯ ಅದು.

ಅವರಿಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ತೋರಿಸಿದ ಇನ್ನೊಂದು ದೃಶ್ಯ ಕಾರಿನಲ್ಲಿ ಜತೆಯಾಗಿ ಪಯಣಿಸುತ್ತಿರುವುದು. ಈ ವಿಡಿಯೊವನ್ನು ಪೋಸ್ಟ್ ಮಾಡಿ ನಟರಿಬ್ಬರೂ ಜತೆಯಾಗಿ ಪಯಣ ಮುಗಿಸಿದರು ಎಂದು ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

ನಿಖಿಲ್ ಅಡ್ವಾಣಿ ನಿರ್ದೇಶನ ಡಿ-ಡೇ ಸಿನಿಮಾದಲ್ಲಿ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಕಥಾಪಾತ್ರದಲ್ಲಿ ರಿಷಿ ಕಪೂರ್ ಕಾಣಿಸಿಕೊಂಡಿದ್ದು, ಇರ್ಫಾನ್ ಖಾನ್ ಬೇಹುಗಾರಿಕೆ ಮಾಡುವ ಅಧಿಕಾರಿ ವಾಲಿ ಖಾನ್ ಪಾತ್ರ ನಿರ್ವಹಿಸಿದ್ದರು. 
ಇರ್ಫಾನ್ ಮತ್ತು ರಿಷಿ ಕಪೂರ್ ವೃತ್ತಿ ಜೀವನದಲ್ಲಿನ ಉತ್ತಮ ಚಿತ್ರಗಳ ಪೈಕಿ ಡಿ-ಡೇ ಚಿತ್ರವೂ ಇದೆ. ಈ ಚಿತ್ರದಲ್ಲಿ ಇವರಿಬ್ಬರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು