ಗುರುವಾರ , ಸೆಪ್ಟೆಂಬರ್ 23, 2021
24 °C

ರಣಬೀರ್ ನನ್ನ ಡ್ರೆಸ್ ಕದ್ದು ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದ: ಸಹೋದರಿಯಿಂದ ರಿವೀಲ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಭಾನುವಾರ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಕಾಮಿಡಿ ವಿತ್ ಕಪಿಲ್‘ ಕಾರ್ಯಕ್ರಮದಲ್ಲಿ ರಿಷಿ ಕಪೂರ್ ಪತ್ನಿ ಬಾಲಿವುಡ್ ನಟಿ ನೀತು ಕಪೂರ್ ಹಾಗೂ ಅವರ ಮಗಳು ರಿದ್ದಿಮಾ ಕಪೂರ್ ಸಹನಿ ಭಾಗವಹಿಸಿದ್ದರು.

ಎಂದಿನಂತೆ ಕಪಿಲ್ ಶರ್ಮಾ ಅವರು ತಮ್ಮ ಕಚಗುಳಿ ನೀಡುವ ಡೈಲಾಗ್‌ಗಳ ಮೂಲಕ ತಾಯಿ ಹಾಗೂ ಮಗಳನ್ನು ಮಾತನಾಡಿಸಿ ಪ್ರೇಕ್ಷಕರಿಗೆ ಕಪೂರ್ ಫ್ಯಾಮಿಲಿಯ ಅನೇಕ ಸ್ವಾರಸ್ಯಕರ ವಿಷಯಗಳನ್ನು ತಿಳಿಸಿ ಕೊಟ್ಟರು.

ಈ ವೇಳೆ ರಿದ್ದಿಮಾ ಕಪೂರ್, ತಮ್ಮ ಸಹೋದರ ಬಾಲಿವುಡ್ ನಟ ರಣಬೀರ್ ಕಪೂರ್ ಬಗೆಗೆ ಹೇಳಿದ ಸ್ವಾರಸ್ಯಕರ ಸಂಗತಿಗೆ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು. ‘ರಣಬೀರ್ ಕಾಲೇಜ್ ಓದುತ್ತಿರುವಾಗ ನಾನು ಹೊಸದಾಗಿ ಖರೀದಿಸಿದ್ದ ಡ್ರೆಸ್ ಒಂದನ್ನು ಕದ್ದು ತನ್ನ ಗರ್ಲ್ ಫ್ರೆಂಡ್‌ಗೆ ಉಡುಗೊರೆಯಾಗಿ ನೀಡಿದ್ದ. ಅವನು ತುಂಬಾ ಮುಜುಗರ ಸ್ವಭಾವದವನಾಗಿದ್ದ‘ ಎಂದು ರಿದ್ದಿಮಾ ಹೇಳಿದ ಮೇಲೆ ಪ್ರೇಕ್ಷಕರು ಗೊಳ್ಳೆಂದು ನಕ್ಕಿದ್ದರು.

ನೀತು ಕಪೂರ್ ಮಾತನಾಡಿ, ‘70–80 ರ ದಶಕದಲ್ಲಿ ನಾನು ಅನೇಕ ಚಿತ್ರಗಳಲ್ಲಿ ನಟಿಸಿದೆ, ನನ್ನ ಬಾಳಿನಲ್ಲಿ ರಿಷಿ ಕಪೂರ್ ಬಂದ ಮೇಲೆ ಬಹಳಷ್ಟು ಬದಲಾವಣೆ ಆಯಿತು. ನಾನು 5 ನೇ ವಯಸ್ಸಿನಲ್ಲಿ ನಟನೆ ಶುರು ಮಾಡಿ, 20 ನೇ ವಯಸ್ಸಿಗೆ ಮದುವೆಯಾದೆ‘ ಎಂದು ಹೇಳಿ ತಮ್ಮ ಹಾಗು ರಿಷಿ ಕಪೂರ್ ಅವರ ಜೀವನಯಾನವನ್ನು ಸ್ಮರಿಸಿಕೊಂಡರು.

ರಿಷಿ ಕಪೂರ್ ಅವರ 69 ನೇ ಜನ್ಮದಿನದ ಪ್ರಯುಕ್ತ ಕಾಮಿಡಿ ವಿತ್ ಕಪಿಲ್ ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ರಿದ್ದಿಮಾ ಕಪೂರ್ ಪ್ರಸಿದ್ದ ಫ್ಯಾಶನ್ ಡಿಸೈನರ್ ಆಗಿದ್ದಾರೆ.

 

ಇದನ್ನೂ ಓದಿ: ಆರೋಗ್ಯವೇ ಭಾಗ್ಯ ಎಂದ ನಟಿ ರಮ್ಯಾ: ಇನ್‌ಸ್ಟಾಗ್ರಾಂನಲ್ಲಿ ಹೆಲ್ತ್ ಟಿಪ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು