ಕಲಬುರಗಿ: ತೊಗರಿನಾಡು ಕಲಬುರಗಿಯು ದಶಕದ ನಂತರ ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿಯ ಆತಿಥ್ಯಕ್ಕೆ ಸಜ್ಜಾಗಿದೆ. ಐಟಿಎಫ್ ಡಬ್ಲ್ಯು–35 ದರ್ಜೆಯ ಮಹಿಳಾ ವಿಶ್ವ ಟೂರ್ ಟೂರ್ನಿಯ ಮುಖ್ಯಸುತ್ತಿನ ಪಂದ್ಯಗಳು ಮಂಗಳವಾರದಿಂದ ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಸೇರಿದಂತೆ 11 ದೇಶಗಳ ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. 2012 ಮತ್ತು 2015ರಲ್ಲಿ ಇಲ್ಲಿ ಮಹಿಳಾ ಟೆನಿಸ್ ಟೂರ್ನಿಗಳು ನಡೆದಿದ್ದವು.

ಅಂದಾಜು ₹27 ಲಕ್ಷ ಬಹುಮಾನ ಮೊತ್ತದ ಈ ಬಾರಿಯ ಟೂರ್ನಿಯು ಮಾರ್ಚ್ 1ರಿಂದ ನಡೆಯುತ್ತಿದ್ದು, ಅರ್ಹತಾ ಸುತ್ತಿನ ಪಂದ್ಯಗಳು ಮುಗಿದಿವೆ.

ಮಂಗಳವಾರ ನಡೆಯುವ ಪ್ರಧಾನ ಸುತ್ತುಗಳ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ, ಅಗ್ರ ಶ್ರೇಯಾಂಕ ಪಡೆದಿರುವ ನೆದರ್ಲೆಂಡ್ಸ್ನ ಯಾಸ್ಮಿನ್ ಜಿಂಬ್ರೆರೆ ಅವರಿಗೆ ಭಾರತದ ಐಶ್ವರ್ಯಾ ಜಾಧವ್ ಸವಾಲೊಡ್ಡುವರು. ಐಶ್ವರ್ಯಾ ಅವರು ಅರ್ಹತಾ ಸುತ್ತನ್ನು ದಾಟಿಬಂದಿದ್ದಾರೆ. ಥಾಯ್ಲೆಂಡ್ ಅಂಚಿಸಾ ಚಂಥಾ ಎರಡನೇ ಶ್ರೇಯಾಂಕ ಪಡೆದಿದ್ದು, ಬ್ರಿಟನ್ನ ಅಲೆಗ್ರಾ ಕೊರ್ಪಾನೆಕ್ ಡೇವಿಸ್ ಎದುರು ಸೆಣಸಲಿದ್ದಾರೆ.

ಭಾರತದ ಪ್ರಮುಖ ಆಟಗಾರ್ತಿಯರಾದ ಅಂಕಿತಾ ರೈನಾ, ಜೀಲ್ ದೇಸಾಯಿ ಅವರೊಂದಿಗೆ ವೈಷ್ಣವಿ ಅಡ್ಕರ್, ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ, ಆಕಾಂಕ್ಷಾ ದಿಲೀಪ್ ನಿಟ್ಟೂರೆ, ಎ. ಲಕ್ಷ್ಮಿ ಪ್ರಭಾ ಪ್ರಶಸ್ತಿಗಾಗಿ ಹೋರಾಟ ನಡೆಸುವರು. ಸೋಹಾ ಸಾದಿಕ್, ಅಮೋದಿನಿ ನಾಯಕ್, ಸಮಾ ಚೆವಿಕಾ ರೆಡ್ಡಿ, ಜೆನ್ನಿಫರ್ ಲೂಕಿಮ್ ಅವರು ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ.

ಕರ್ನಾಟಕದ ಸ್ನಿಗ್ಧಾ ಕಾಂತಾ ಹಾಗೂ ಹರ್ಷಿಣಿ ನಾಗರಾಜ್ ಅವರು ಡಬಲ್ಸ್ನಲ್ಲಿ ಜೊತೆಯಾಗಿ ಆಡಲಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ 32 ಮತ್ತು ಡಬಲ್ಸ್ನಲ್ಲಿ 16 ಆಟಗಾರ್ತಿಯರು ಕಣದಲ್ಲಿದ್ದಾರೆ. ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ. ಇಲ್ಲಿ ಪ್ರಶಸ್ತಿ ಜಯಿಸುವವರು 35 ಡಬ್ಲ್ಯುಟಿಎ ರ್ಯಾಂಕಿಂಗ್ ಪಾಯಿಂಟ್ಸ್ ಕೂಡ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.