ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಾಬರಿ ಕಥೆ’ ಮಾರ್ಚ್‌ 10ರಂದು ತೆರೆ ಮೇಲೆ

Last Updated 8 ಮಾರ್ಚ್ 2023, 13:23 IST
ಅಕ್ಷರ ಗಾತ್ರ

ನಿಧಿ ಹುಡುಕಾಟದ ವಸ್ತು ಹೊಂದಿರುವ ‘1 ರಾಬರಿ ಕಥೆ’ ಟ್ರೈಲರ್‌ನಲ್ಲಿ ಮೂಡಿಬಂದಿದೆ. ಗೋಪಾಲ್‌ ಹಳ್ಳೇರ ಹೊನ್ನಾವರ ಅವರ ಕಥೆ, ನಿರ್ದೇಶನದ ಚಿತ್ರವಿದು. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ್‌ ಅಡಿ ಈ ಚಿತ್ರ ನಿರ್ಮಿಸಿದ್ದಾರೆ. ‘ರಕ್ಕಂ’ ಖ್ಯಾತಿಯ ರಣಧೀರ್‌ ಗೌಡ ಚಿತ್ರದ ನಾಯಕ. ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿ. ಮಾರ್ಚ್‌ 10ರಂದು ಚಿತ್ರ ತೆರೆಗೆ ಬರಲಿದೆ.

ಹಾಡು ಮತ್ತು ಟ್ರೈಲರ್‌ ಏಕಕಾಲದಲ್ಲಿ ಬಿಡುಗಡೆ ಆಗಿದೆ. ನಾಯಕ ಬಂಗಾರ ದರೋಡೆಮಾಡಿ ಆ ನಿಧಿಯನ್ನು ಒಂದೆಡೆ ಸಂಗ್ರಹಿಸಿಡುತ್ತಾನೆ. ನಂತರ ಆತ 5 ವರ್ಷ ಜೈಲಿನಲ್ಲಿರಬೇಕಾಗುತ್ತದೆ. ಜೈಲಿನಿಂದ ಹೊರಬಂದ ಮೇಲೆ ನಿಧಿ ಅವನಿಗೆ ವಾಪಸ್‌ ಸಿಕ್ಕಿತೇ ಇಲ್ಲವೇ ಎಂಬುದು ಚಿತ್ರದ ಕಥೆ ಎಂದರು ನಿರ್ದೇಶಕರು.

ನಾಯಕ ರಣಧೀರ್‌ಗೌಡ ಮಾತನಾಡಿ, ಕೃಷ್ಣ ಎನ್ನುವ ನನ್ನ ಪಾತ್ರಕ್ಕೆ 2 ಶೇಡ್ ಇವೆ. ಸಿಂಧನೂರಿನ ರವಕುಂದ, ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ ಎಂದರು.

ನಾಯಕಿ ರಿಶ್ವಿಭಟ್ ಅವರದ್ದು ಅಂಗನವಾಡಿ ಶಿಕ್ಷಕಿಯ ಪಾತ್ರವಂತೆ. ಹಿರಿಯನಟ ಸುಂದರರಾಜ್ ಅವರು ನೆಗೆಟಿವ್ ಶೇಡ್ ಇರುವ ಶಾಸಕನ ಪಾತ್ರ ಮಾಡಿದ್ದಾರೆ. ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ನಿರ್ಮಾಪಕ ಸಂತೋಷ್ ನಾಗೇನಹಳ್ಳಿ ಅವರೂ ಬಣ್ಣ ಹಚ್ಚಿದ್ದಾರೆ.

ಶಿವರಾಜ್ ಕೆ.ಆರ್. ಪೇಟೆ, ಕರಿಸುಬ್ಬು, ಕಡ್ಡಿಪುಡಿಚಂದ್ರು, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಡಿ. ಪಡೀಲ್, ಸಂಜುಬಸಯ್ಯ ತಾರಾಗಣದಲ್ಲಿದ್ದಾರೆ. ಪ್ರಕಾಶ್ ಅವರ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಅವರ ಸಾಹಿತ್ಯ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ ಮತ್ತು ಚಾಮರಾಜ್, ರೋಹಿತ್ ಅರುಣ್ ಅವರ ನೃತ್ಯನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT