ಭಾನುವಾರ, ಜುಲೈ 3, 2022
24 °C

ದರ್ಶನ್‌ ಅಭಿನಯದ ರಾಬರ್ಟ್‌ ತೆಲುಗು ಟೀಸರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದರ್ಶನ್ ನಟನೆಯ ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗದಲ್ಲಿ ಎದುರಾಗಿದ್ದ ನಿರ್ಬಂಧ ಬಗೆಹರಿದ ಬೆನ್ನಲ್ಲೇ, ಬುಧವಾರ ಸಂಜೆ ಚಿತ್ರತಂಡವು ಚಿತ್ರದ ತೆಲುಗು ಟೀಸರ್‌ ಬಿಡುಗಡೆ ಮಾಡಿದೆ. 

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 4.61ಲಕ್ಷಕ್ಕೂ ಅಧಿಕ ಜನರು ಇದನ್ನು ವೀಕ್ಷಿಸಿದ್ದು, ಕನ್ನಡದಲ್ಲಿ ಬಿಡುಗಡೆಯಾದ ಟೀಸರ್‌ ಅನ್ನೇ ತೆಲುಗಿಗೆ ಡಬ್‌ ಮಾಡಲಾಗಿದೆ. ಮಾ.11ರಂದೇ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರವು ಬಿಡುಗಡೆಯಗುವುದು ಇದೀಗ ಖಚಿತವಾಗಿದೆ.

ಮಾ.11ರಂದು ತೆಲುಗಿನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವ ಕಾರಣಕ್ಕೆ ತೆಲುಗು ಭಾಷೆಯಲ್ಲಿ ರಾಬರ್ಟ್‌ ಚಿತ್ರ ಬಿಡುಗಡೆಗೆ ಅಡ್ಡಿ ಉಂಟಾಗಿತ್ತು. ಈ ಚಿತ್ರವನ್ನು ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು