ಬುಧವಾರ, ಅಕ್ಟೋಬರ್ 21, 2020
22 °C

ಸುನಿ– ಪುಷ್ಕರ್‌ ಸಾರಥ್ಯದಲ್ಲಿ ‘ರಾಬಿನ್‌ಹುಡ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಸಿಂಪಲ್‌ ಸುನಿ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ದಿನ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯೂ ಸಿಕ್ಕಿದೆ. 2021ರ ಸಾಲಿಗೆ ಭರ್ಜರಿಯಾದ ಪ್ರಾಜೆಕ್ಟ್‌ವೊಂದನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಸುನಿ ಮತ್ತು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರ ಸಾರಥ್ಯದಲ್ಲಿ ಹೊಸ ಚಿತ್ರ ಮೂಡಿಬರಲಿದೆ. ಚಿತ್ರದ ಹೆಸರು ‘ರಾಬಿನ್‌ಹುಡ್‌’. ಈ ಚಿತ್ರ ಬರುವ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಸೆಟ್ಟೇರಲಿದೆ. ಚಿತ್ರದ ಫಸ್ಟ್‌ಲುಕ್‌ ಎನ್ನುವಂತೆ ಶೀರ್ಷಿಕೆಯ ಆಕರ್ಷಕ ಪೋಸ್ಟರ್‌ ಅನ್ನು ಈ ಇಬ್ಬರು ಹಂಚಿಕೊಂಡಿದ್ದಾರೆ.

ಚಿತ್ರದ ಕಥೆ– ಚಿತ್ರಕಥೆಯೂ ಸಿದ್ಧವಾಗಿದ್ದು, ಇದೊಂದು ಸಾಹಸ ಪ್ರಧಾನ ಕಥಾಹಂದರವೊಂದಿರಲಿದೆ. ಇಡೀ ಕುಟುಂಬ ನೋಡಿ ಖುಷಿ ಪಡುವಂತಹ ಭರಪೂರ ಮನರಂಜನೆ ಒದಗಿಸುವ ಎಲ್ಲ ಅಂಶಗಳು ಈ ಚಿತ್ರದಲ್ಲಿ ಮಿಳಿತವಾಗಿರಲಿವೆಯಂತೆ. ಈ ಚಿತ್ರದ ನಾಯಕ ಮತ್ತು ನಾಯಕಿ ಪಾತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುವುದು ಸುನಿ ಮತ್ತು ಪುಷ್ಕರ್‌ ಯೋಜನೆಯೂ ಆಗಿದೆಯಂತೆ. ದುಷ್ಯಂತ್‌ ಎಂಬ ಹೊಸ ನಟ ನಾಯಕನಾಗಿ ಈ ಚಿತ್ರದಲ್ಲಿ ಬಣ್ಣ ಹಚ್ಚಲಿರುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಲಿದ್ದಾರೆ. ನಾಯಕಿಗಾಗಿ ಇನ್ನು ಹುಡುಕಾಟ ನಡೆಯುತ್ತಿದೆಯಂತೆ. 

ಸದ್ಯ ಸುನಿ ಅವರು ಶರಣ್‌ ಮತ್ತು ಆಶಿಕಾ ರಂಗನಾಥ್‌ ಜೋಡಿ ಮತ್ತೊಮ್ಮೆ ಜತೆಯಾಗಿರುವ ‘ಅವತಾರಪುರುಷ’ ಚಿತ್ರ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ‘ಸಖತ್‌’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಕೆಲಸಗಳನ್ನು ಪೂರ್ಣಗೊಳಿಸಿ ಹೊಸ ಚಿತ್ರವನ್ನು ಸುನಿ ಕೈಗೆತ್ತಿಕೊಳ್ಳಲಿದ್ದಾರೆ. ಈ ನಡುವೆ ಗಣೇಶ್‌ ಮತ್ತು ಸುನಿ ಕಾಂಬಿನೇಷನ್‌ನಲ್ಲಿ ಡಾರ್ಕ್‌ ಹ್ಯೂಮರಸ್‌ ಕಥೆಯ ಹೊಸ ಚಿತ್ರ ‘ದ ಸ್ಟೋರಿ ಆಫ್‌ ರಾಯಗಢ’ ಘೋಷಣೆಯಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು