ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗೋಚರ’ದ ಹಿಂದೆ ರೂಪಾ ರಾವ್‌

Published : 24 ಸೆಪ್ಟೆಂಬರ್ 2024, 19:24 IST
Last Updated : 24 ಸೆಪ್ಟೆಂಬರ್ 2024, 19:24 IST
ಫಾಲೋ ಮಾಡಿ
Comments

ಯಾರೂ ಸಲೀಸಾಗಿ ಮುಟ್ಟಲಾಗದ ಕಥೆಗೆ ದೃಶ್ಯರೂಪ ಕೊಟ್ಟವರು ನಿರ್ದೇಶಕಿ ರೂಪಾ ರಾವ್. ಈ ಹಿಂದೆ ‘ಗಂಟುಮೂಟೆ’ ಎಂಬ ಭಿನ್ನ ಬಗೆಯ ಚಿತ್ರವನ್ನು ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ವಿರಳವಾಗಿರುವ ನಿರ್ದೇಶಕಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಇರುವಾಗಲೇ ಏಕಾಏಕಿ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ‘ಕೆಂಡ’ ಚಿತ್ರವನ್ನು ನಿರ್ಮಾಣ ಮಾಡಿದರು. ಸಹದೇವ್‌ ಕೆಳವಡಿ ನಿರ್ದೇಶನದ ಈ ಚಿತ್ರ ಹಲವು ಚಿತ್ರೋತ್ಸವಗಳಲ್ಲಿ ಜನಮನ್ನಣೆ ಗಳಿಸಿತು. 

ಇದೀಗ ಮತ್ತೆ ರೂಪಾ ರಾವ್ ನಿರ್ದೇಶನಕ್ಕೆ ಮರಳಿದ್ದಾರೆ. ಈ ಸಿನಿಮಾಕ್ಕೆ ‘ಗೋಚರ’ ಎಂದು ಹೆಸರಿಡಲಾಗಿದೆ. ಇದನ್ನು ರೂಪಾ ರಾವ್‌ ಮತ್ತು ಸಹದೇವ್‌ ಕೆಳವಡಿ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ‘ಗಂಟುಮೂಟೆ’ಯ ಮುಂದುವರಿದ ಭಾಗವೇ ಎಂಬ ಪ್ರಶ್ನೆ‌ ಮೂಡಿಸುತ್ತಿದೆ ಚಿತ್ರದ ಪೋಸ್ಟರ್‌. ಹುಡುಗಿ, ರೈಲು, ‘ಗಂಟುಮೂಟೆ–2’ ಎಂಬ ಸಾಲು ಹೊಂದಿರುವ ಬೆಂಚು ಎಲ್ಲವನ್ನೂ ಚಿತ್ರದ ಪೋಸ್ಟರ್‌ನಲ್ಲಿ ತೋರಿಸಲಾಗಿದೆ.

‘ಇದು ಬೇರೆಯದೇ ಕಥೆ. ಇದೊಂದು ಟ್ರಾವೆಲ್‌ ಕಥೆಯನ್ನು ಹೊಂದಿರುವ ಸಿನಿಮಾ. ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದಿದೆ ಚಿತ್ರತಂಡ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT