ಗುರುವಾರ , ಮೇ 26, 2022
24 °C

ಆರ್‌ಆರ್‌ಆರ್‌ ಚಿತ್ರ: ಕನ್ನಡದ ಪ್ರೇಕ್ಷಕರು ನಿಷ್ಠಾವಂತರು ಎಂದ ನಟ ರಾಮ್‌ಚರಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆರ್‌ಆರ್‌ಆರ್‌ ಚಿತ್ರದಲ್ಲಿ ಆನಂದಿಸುತ್ತಲೇ ಭಾಗವಹಿಸಿದ್ದೇನೆ. ಅದರಲ್ಲೂ ಕನ್ನಡದಲ್ಲಿ ಡಬ್‌ ಮಾಡಲು ನಿರ್ದೇಶಕ ರಾಜಮೌಳಿ ಪ್ರೇರಣೆ ನೀಡಿದರು. ನಮ್ಮ ಚಿತ್ರಗಳಿಗೆ ಇಲ್ಲಿನ (ಕನ್ನಡದ) ಜನರ ಪ್ರತಿಕ್ರಿಯೆ ನೋಡಿ ಖುಷಿ ಅನಿಸುತ್ತದೆ. ಇಲ್ಲಿ ನಿಷ್ಠಾವಂತ ಪ್ರೇಕ್ಷಕರು ಇದ್ದಾರೆ’ ಎಂದು ಹೇಳಿದರು ಆರ್‌ಆರ್‌ಆರ್‌ ಚಿತ್ರದ ನಟ ರಾಮ್‌ಚರಣ್‌. 

ಆರ್‌ಆರ್‌ಆರ್‌ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್‌ ಬಿಡುಗಡೆಯ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಅವರು ಕನ್ನಡ ಪ್ರೇಕ್ಷಕರನ್ನು ಶ್ಲಾಘಿಸಿದ್ದು ಹೀಗೆ. 

ಕನ್ನಡ ಅವತರಣಿಕೆ ನಿರ್ಮಿಸುವಾಗ ತುಂಬಾ ಎಚ್ಚರಿಕೆಯಿಂದ ಮಾಡಿದ್ದೇವೆ. ಪ್ರೇಕ್ಷಕರು ಟ್ರೇಲರ್‌ಗೆ ಭರ್ಜರಿ ಸ್ವಾಗತ ನೀಡಿದ್ದಾರೆ. ಚಿತ್ರಕ್ಕೂ ಇದೇ ರೀತಿ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ ಎಂದರು ರಾಮ್‌ಚರಣ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು