ಮಂಗಳವಾರ, ಸೆಪ್ಟೆಂಬರ್ 21, 2021
27 °C

ಸ್ನೇಹಿತರ ದಿನ: ಅಭಿಮಾನಿಗಳಿಗೆ ’ದೋಸ್ತಿ’ ಹಾಡಿನ ಗಿಫ್ಟ್‌ ಕೊಟ್ಟ ‘RRR’ ಚಿತ್ರತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಸಿನಿಮಾದ 'ದೋಸ್ತಿ’ ಮ್ಯೂಸಿಕ್‌ ವಿಡಿಯೊ ಭಾನುವಾರ ಬಿಡುಗಡೆಯಾಗಿದೆ.

ಸ್ನೇಹಿತರ ದಿನವಾದ (ಆಗಸ್ಟ್‌ 1) ಇಂದು ಚಿತ್ರತಂಡ 'ದೋಸ್ತಿ’ ಮ್ಯೂಸಿಕ್‌ ವಿಡಿಯೊವನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಆರ್‌ ಚಿತ್ರತಂಡ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಇದಾಗಿದೆ.

ಬಾಹುಬಲಿ ಚಿತ್ರಕ್ಕೆ ಸುಮಧುರ ಸಂಗೀತ ನೀಡಿದ್ದ ಎಂಎಂ ಕೀರವಾಣಿ ಅವರೇ ಆರ್‌ಆರ್‌ಆರ್‌ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ದೋಸ್ತಿ ಮ್ಯೂಸಿಕ್‌ ವಿಡಿಯೊ’ ದಲ್ಲೂ ಕೀರವಾಣಿ ಕಮಾಲ್‌ ಮಾಡಿದ್ದಾರೆ. 

ಮ್ಯೂಸಿಕ್‌ ವಿಡಿಯೊದಲ್ಲಿ ಹಾಡುಗಾರ ಯಾಜಿನ್‌ ನಿಜ್ಹಾರ್‌ ಬಂದು ಹೋಗುತ್ತಾರೆ. ಹಾಗೇ ತೆಲುಗು, ತಮಿಳು, ಮಲಯಾಳಂ ಹಾಡುಗಾರರು ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಾಡಿನ ಕೊನೆಯಲ್ಲಿ  ರಾಮ್‌ ಚರಣ್ , ಜೂನಿಯರ್ ಎನ್‌ಟಿಆರ್ ಅವರ ಆಗಮನ ಅಭಿಮಾನಿಗಳಿಗೆ ಸಖತ್‌ ಖುಷಿ ಕೊಟ್ಟಿದೆ.

ಇದನ್ನು ಓದಿ: ಆರ್‌ಆರ್‌ಆರ್‌’ ಚಿತ್ರೀಕರಣ ಪುನರಾರಂಭ

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ಸಿನಿಮಾವನ್ನು ಬರುವ ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು