ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RRR ‘ಸಲಿಂಗ ಕಾಮ‘ ಸಿನಿಮಾ ಎಂದ ವಿದೇಶಿಯರು: ಭಾರತೀಯರ ಆಕ್ರೋಶ

ಅಕ್ಷರ ಗಾತ್ರ

ಬೆಂಗಳೂರು: ಭಾರತದ ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಆರ್‌ಆರ್‌ಆರ್‌‘ ಸಿನಿಮಾಕುರಿತು ಪಾಶ್ಚಿಮಾತ್ಯರು ಇದು ‘ಸಲಿಂಗ ಕಾಮ‘ ಸಿನಿಮಾ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.

ತೆಲುಗಿನ ಸೂಪರ್‌ಸ್ಟಾರ್ ಹಿರೋಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಪಾತ್ರಗಳ ಬಗ್ಗೆ ವಿದೇಶಿ ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ಈ ಪಾತ್ರಗಳ ನಡುವಿನ ಸ್ನೇಹವನ್ನು 'ಬೇರೆಯೇ' ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು, ಸ್ಟೇಟಸ್‌ಗಳು, ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇವರ ಪೋಸ್ಟ್‌ಗಳನ್ನು ಭಾರತೀಯ ಸಿನಿಮಾ ಅಭಿಮಾನಿಗಳು ಗೇಲಿ ಮಾಡುತ್ತಿದ್ದು, ಪಾಶ್ಚಿಮಾತ್ಯರಿಗೆ ಸ್ನೇಹದ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.

‘ಆರ್‌ಆರ್‌ಆರ್’ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಈ ಚಿತ್ರ ಹಲವು ದಾಖಲೆಗಳನ್ನು ಬರೆದಿದೆ. ಚಿತ್ರದ ಎರಡು ಪ್ರಮುಖ ಪಾತ್ರಗಳ ನಡುವಿನ ಕೆಮಿಸ್ಟ್ರಿಯಿಂದಾಗಿ ‘ಗೇ‘ ಸಿನಿಮಾ ಎಂದು ವಿದೇಶಿಯರು ಹೇಳುತ್ತಿದ್ದಾರೆ.

ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂಭೀಮ್ (ಜೂನಿಯರ್ ಎನ್ ಟಿಆರ್) ಅವರ ನಡುವಿನ ಗೆಳೆತನವನ್ನುವಿದೇಶಿ ಪ್ರೇಕ್ಷಕರು ತಪ್ಪಾಗಿ (ಸಲಿಂಗ ಕಾಮ) ಅರ್ಥ ಮಾಡಿಕೊಂಡಿದ್ದಾರೆ. ಇದುಸಲಿಂಗಕಾಮಚಿತ್ರ ಎಂದು ನಿಮ್ಮಲ್ಲಿ ಯಾರೂ ನನಗೆ ಏಕೆ ಹೇಳಲಿಲ್ಲ ಎಂದು ಪಾಶ್ಚಿಮಾತ್ಯ ವೀಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ. ಇದೇ ಮಾದರಿಯಲ್ಲಿ ನೂರಾರು ಜನರು ಪೋಸ್ಟ್‌ಗಳನ್ನು ಮಾಡಿದ್ದಾರೆ.

ಚಿತ್ರದ ಕಥೆಯನ್ನು ಅರ್ಥಮಾಡಿಕೊಳ್ಳದ ಪಾಶ್ಚಿಮಾತ್ಯರು ಎರಡು ಪಾತ್ರಗಳ ಆತ್ಮೀಯತೆ, ಸ್ನೇಹವನ್ನು ಸಲಿಂಗ ಕಾಮ ಎಂದು ಭಾವಿಸಿದ್ದಾರೆ.ಆದರೆ ಆರ್‌ಆರ್‌ಆರ್‌ ಸಲಿಂಗ ಪ್ರೇಮದ ಚಿತ್ರ ಅಲ್ಲ ಎಂದು ಭಾರತೀಯ ಅಭಿಮಾನಿಗಳು ಹೇಳುತ್ತಿದ್ದಾರೆ.

ಈ ನಡುವೆ ಟಾಲಿವುಡ್‌ನ ವಿವಾದಿತನಿರ್ದೇಶಕ ರಾಮ್‌ ಗೋಪಾಲ ವರ್ಮಾ ಕೂಡಾ ‘ಆರ್‌ಆರ್‌ಆರ್‌‘ ಸಲಿಂಗ ಪ್ರೇಮದ ಚಿತ್ರ ಎಂಬರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಶ್ಚಿಮಾತ್ಯರ ಈ ಚರ್ಚೆಗೆ ಭಾರತೀಯ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಾದೇಶಿಕತೆಯ ಇಬ್ಬರು ಯುವಕರ ನಡುವಿನ ಆಳವಾದ ಸ್ನೇಹ, ಆತ್ಮೀಯತೆಯನ್ನು ಪಾಶ್ಚಿಮಾತ್ಯರು ತಪ್ಪಾಗಿ ನೋಡಿದ್ದಾರೆ.ನಿಮ್ಮ ನೆಲ, ವಾತಾವರಣ, ಗ್ರಹಿಕೆಯಿಂದಾಗಿ ನಿಮಗೆ ಹಾಗೆ ಅನಿಸುತ್ತಿದೆ. ವಾಸ್ತವವಾಗಿ ಆರ್‌ಆರ್‌ಆರ್‌ ಕ್ರಾಂತಿಕಾರಿಗಳು, ದೇಶ ಪ್ರೇಮಿಗಳು ಹಾಗೂ ಇಬ್ಬರು ಗೆಳೆಯರ ನಡುವಿನ ಸಿನಿಮಾವಾಗಿದೆ. ಇವು ಅಂದುಕೊಂಡಿರುವಂತಹ ಚಿತ್ರವಲ್ಲ ಎಂದು ವಿದೇಶಿ ವೀಕ್ಷಕರನ್ನು ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT