ಶನಿವಾರ, ಡಿಸೆಂಬರ್ 14, 2019
25 °C

ಕೋಟಿ ಕೈಬಿಟ್ಟ ನ್ಯಾಚುರಲ್‌ ಬ್ಯೂಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಹಿಂದೆ ಎರಡು ಕೋಟಿ ರೂಪಾಯಿ ಫೇರ್‌ನೆಸ್‌ ಕ್ರೀಮ್‌ ಜಾಹೀರಾತು ಆಫರ್‌ ನಿರಾಕರಿಸುವ ಮೂಲಕ ಸುದ್ದಿಯಾಗಿದ್ದ ನಟಿ ಸಾಯಿ ಪಲ್ಲವಿ ಈ ಬಾರಿ ಮತ್ತೆ ಅದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.

ಬಟ್ಟೆ ಶಾಪಿಂಗ್‌ ಮಾಲ್‌ ಬ್ರಾಂಡ್‌ ಅಂಬಾಸಿಡರ್‌ ಆಗಲು ಈ ಸಹಜ ಸುಂದರಿ ಮುಲಾಜಿಲ್ಲದೆ ನಿರಾಕರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕಾಗಿ ಶಾಪಿಂಗ್ ಮಾಲ್‌ ಒಂದು ಕೋಟಿ ರೂಪಾಯಿ ಆಫರ್ ನೀಡಿತ್ತು. ಫೇರ್‌ನೆಸ್‌ ಕ್ರೀಮ್‌ನಿಂದ ಅಂದ ಹೆಚ್ಚುತ್ತಿದೆ ಎಂಬ ವಿಷಯದಲ್ಲಿ ವೈಯಕ್ತಿಕವಾಗಿ ನಂಬುಗೆ ಇಲ್ಲ. ಜಾಹೀರಾತಿನಲ್ಲಿ ನಟಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಮನಸ್ಸಿಲ್ಲ ಎಂದು ಸಾಯಿ ಪಲ್ಲವಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈಗ ಮತ್ತೊಂದು ಅದೇ ರೀತಿಯ ಗಟ್ಟಿ ನಿರ್ಧಾರ ತೆಳೆಯುವ ಮೂಲಕ ಜೀವನಕ್ಕೆ ದುಡ್ಡು ಮುಖ್ಯವಲ್ಲ, ತತ್ವ, ಸಿದ್ಧಾಂತಗಳು ಎಂಬ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ಹವಾ

ಪ್ರತಿಕ್ರಿಯಿಸಿ (+)