ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿ ಪಲ್ಲವಿ ಹವಾ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಲೆಯಾಳಂ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ಸಾಯಿ ಪಲ್ಲವಿ ಟಾಲಿವುಡ್‌ಗೆ ಕಾಲಿಟ್ಟಿದ್ದು, ಮೊದಲ ತೆಲುಗು ಚಿತ್ರದಲ್ಲೇ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ.

ಸಾಯಿ ಪಲ್ಲವಿ ಅವರ ಮೊದಲ ತೆಲುಗು ಚಿತ್ರ ‘ಫಿದಾ’ ಭರ್ಜರಿ ಯಶಸ್ಸು ಕಂಡಿದೆ. ಈ ಜನಪ್ರಿಯತೆಯನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಯೋಜಿಸಿರುವ ಕೆಲವು ನಿರ್ಮಾಪಕರು ಸಾಯಿ ಪಲ್ಲವಿ ನಟಿಸಿದ್ದ ಮಲೆಯಾಳಂ ಸಿನಿಮಾಗಳನ್ನು ಈಗ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಮಲೆಯಾಳಂನಲ್ಲಿ ಭರ್ಜರಿ ಹಿಟ್ ಆಗಿದ್ದ ದುಲ್ಕರ್ ಸಲ್ಮಾನ್ ಮತ್ತು ಸಾಯಿ ಪಲ್ಲವಿ ನಟನೆಯ ‘ಕಲಿ’ ಸಿನಿಮಾವನ್ನು ತೆಲುಗಿನಲ್ಲಿ ‘ಹೇಯ್ ಪಿಲ್ಲಗಾಡ’ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಯುವಕನೊಬ್ಬನ ಕೋಪ ಮತ್ತು ಅದರಿಂದ ಆತ ಎದುರಿಸಬೇಕಾದ ಕಷ್ಟಗಳ ಕತೆ ಈ ಸಿನಿಮಾದಲ್ಲಿದೆ. ಇದು ಮಲೆಯಾಳಂನಲ್ಲಿ ಭರ್ಜರಿ ಹಿಟ್ ಆಗಿತ್ತು, ಅಷ್ಟೇ ಅಲ್ಲ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

ತೆಲುಗಿನಲ್ಲಿ ಈ ಚಿತ್ರಕ್ಕೆ 'ಹೇಯ್ ಪಿಲ್ಲಗಾಡ' ಎನ್ನುವ ಹೆಸರು ಇಡಲಾಗಿದೆ. ಈ ಚಿತ್ರದ ಕತೆಗೂ- ಈ ಹೆಸರಿಗೂ ಯಾವುದೇ ಸಂಬಂಧ ಇಲ್ಲ. ಆದರೆ, ಇದು ‘ಫಿದಾ’ ಸಿನಿಮಾದ ಜನಪ್ರಿಯ ಸಂಭಾಷಣೆ. ಸಾಯಿ ಪಲ್ಲವಿ ಅಭಿಮಾನಿಗಳನ್ನು ಆಕರ್ಷಿಸಲೆಂದೇ ಈ ಹೆಸರಿಡಲಾಗಿದೆ ಎನ್ನುವುದು ಈಗ ಗುಟ್ಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT