ಬುಧವಾರ, ಅಕ್ಟೋಬರ್ 21, 2020
25 °C

ಸಡಕ್ 2 ಟ್ರೇಲರ್‌: ವಿಶ್ವದಲ್ಲೇ ಅತೀ ಹೆಚ್ಚು ಡಿಸ್‌‌ಲೈಕ್ ಪಡೆದ ಮೂರನೇ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲಿಯಾ ಭಟ್ ನಟನೆಯ, ಮಹೇಶ್ ಭಟ್ ನಿರ್ದೇಶನದ ಬಾಲಿವುಡ್‌ನ ಬಹುನಿರೀಕ್ಷಿತ ‘ಸಡಕ್ 2’ ಸಿನಿಮಾದ ಟ್ರೇಲರ್ ಆಗಸ್ಟ್‌ 12ರಂದು ಬಿಡುಗಡೆಯಾಗಿತ್ತು. ಈ ಟ್ರೇಲರ್ ವಿಶ್ವದಲ್ಲಿ ಅತೀ ಹೆಚ್ಚು ಡಿಸ್‌ಲೈಕ್ ಪಡೆದ ವಿಡಿಯೊಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತೀ ಹೆಚ್ಚು ಡಿಸ್‌ಲೈಕ್ ಪಡೆದ ವಿಡಿಯೊ ಇದಾಗಿದೆ.

ಯೂಟ್ಯೂಬ್‌ನಲ್ಲಿ ಸಡಕ್ 2 ಟ್ರೇಲರ್ ಅನ್ನು 90ಲಕ್ಷಕ್ಕೂ ಅಧಿಕ ಮಂದಿ ಡಿಸ್‌ಲೈಕ್ ಮಾಡಿದ್ದಾರೆ.

ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾದ ದಿನದಿಂದ ಟ್ರೋಲರ್‌ಗಳ ಬಾಯಿಗೆ ಆಹಾರವಾಗುತ್ತಿದೆ. ಬಾಲಿವುಡ್‌ನ ನೆಪೊಟಿಸಂ ಚರ್ಚೆಯಲ್ಲಿ ಅಲಿಯಾ, ಮಹೇಶ್ ಅವರ ಹೆಸರೂ ಹೆಚ್ಚು ಕೇಳಿಬರುತ್ತಿತ್ತು. ಆ ಕಾರಣಕ್ಕೆ ಸಡಕ್ 2 ಟ್ರೇಲರ್‌ಗೆ ಜನ ಮೆಚ್ಚುಗೆ ವ್ಯಕ್ತಪಡಿಸಲಿಲ್ಲ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಸ್ವಜನಪಕ್ಷಪಾತದ ವಿಷಯ ಹೆಚ್ಚು ಚಾಲ್ತಿಯಲ್ಲಿದೆ.

ಈ ಚಿತ್ರದಲ್ಲಿ ಮಹೇಶ್ ಭಟ್ ಮಕ್ಕಳಾದ ಪೂಜಾ ಭಟ್‌, ಅಲಿಯಾ ಭಟ್, ಸಂಜಯ್ ದತ್ ಹಾಗೂ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರ ಕಿರಿಯ ಸಹೋದರ ಆದಿತ್ಯ ರಾಯ್ ಕಪೂರ್ ನಟಿಸಿದ್ದಾರೆ.

ಜುಲೈನಲ್ಲಿ ದಿವಂಗತ ನಟ ಸುಶಾಂತ್ ಕುಟುಂಬ ನೆಪೊಮೀಟರ್ ಎಂಬ ಆ್ಯಪ್‌ವೊಂದನ್ನು ರಚಿಸಿತ್ತು. ಅದರಲ್ಲಿ ಸಡಕ್ 2 ಚಿತ್ರ ಶೇ 98 ಸ್ವಜನಪಕ್ಷಪಾತದಿಂದ ಕೂಡಿದೆ ಎಂದು ರೇಟಿಂಗ್ ಪಡೆದಿತ್ತು. ಜೊತೆಗೆ ಈ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಸುಶಾಂತ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು