‘ಸಾಹೊ’ ಚಿತ್ರನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ‘ಸಾಹೊ’ ಸಿನಿಮಾದ ಹೊಸ ಪೋಸ್ಟರ್ವೊಂದನ್ನು ಈಚೆಗೆ ಟ್ವಿಟರ್ನಲ್ಲಿ ಬಿಡುಗಡೆ ಮಾಡಿದೆ.

ಚಿತ್ರದ ನಾಯಕ ಪ್ರಭಾಸ್, ವೇಗವಾಗಿ ಬೈಕ್ ಓಡಿಸುತ್ತಿರುವ ಆ್ಯಕ್ಷನ್ ಪೋಸ್ಟರ್ ಇದಾಗಿದ್ದು, ಪ್ರಭಾಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ‘ಮೌನವಾಗಿರಿ. ಸ್ಪರ್ಧೆ ನಡೆಯುತ್ತಿದೆ’ ಎನ್ನುವ ಒಕ್ಕಣೆ ಹೊತ್ತ ಈ ಪೋಸ್ಟರ್ನಲ್ಲಿ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗುವ ದಿನಾಂಕವನ್ನೂ ನಮೂದಿಸಲಾಗಿದೆ.

ಸಾಹೊ ಬಿಡುಗಡೆಯ ದಿನದಂದೇ ಅಕ್ಷಯ್ ಕುಮಾರ್ ಅವರ ‘ಮಿಷನ್ ಮಂಗಲ್’ ಮತ್ತು ಜಾನ್ ಅಬ್ರಹಾಂ ಅವರ ’ಬಾತ್ಲಾ ಹೌಸ್’ ಕೂಡಾ ಬಿಡುಗಡೆಯಾಗುತ್ತಿದ್ದು, ಪ್ರಭಾಸ್ ಚಿತ್ರ ತೀವ್ರ ಪೈಪೋಟಿ ಎದುರಿಸುತ್ತಿದೆ.

ಎರಡು ವರ್ಷಗಳ ಹಿಂದೆ ಸಾಹೊ ಚಿತ್ರೀಕರಣ ಆರಂಭವಾಗಿತ್ತು. ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಮತ್ತು ಪ್ರಭಾಸ್ ಜೋಡಿಯಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ಇದು ಶ್ರದ್ಧಾಳ ಮೊದಲ ದಕ್ಷಿಣ ಭಾರತೀಯ ಸಿನಿಮಾ ಕೂಡ.

ಚಿತ್ರದ ನಿರ್ಮಾಪಕರು ಪೋಸ್ಟರ್ ಹೊರತುಪಡಿಸಿ ಮತ್ಯಾವ ವಿವರಗಳನ್ನೂ ಇದುವರೆಗೆ ಮಾಧ್ಯಮಗಳಿಗೆ ಬಿಟ್ಟುಕೊಟ್ಟಿಲ್ಲ. ಪ್ರಭಾಸ್ ಹುಟ್ಟಿದ ಹಬ್ಬದಂದು ಸಾಹೊದ ಮೊದಲ ಅಧ್ಯಾಯ ಹಾಗೂ ಶ್ರದ್ಧಾಳ ಹುಟ್ಟುಹಬ್ಬದಂದು ಎರಡನೇ ಅಧ್ಯಾಯದ ಸಣ್ಣ ಟೀಸರ್ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಟೀಸರ್ ವೀಕ್ಷಿಸಿದವರಿಗೆ ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನುವ ಅಂಶಗಳು ಮೇಲ್ನೋಟಕ್ಕೆ ಗೋಚರಿಸುವಂತಿವೆ. ಆದರೆ, ಪ್ರಭಾಸ್ ಸಿನಿಮಾದಲ್ಲಿ ರೊಮ್ಯಾಂಟಿಕ್ ಅಂಶಗಳಿಗೆ ಕೊರತೆಯಿರುವುದಿಲ್ಲ ಅನ್ನುವುದು ಅವರ ಅಭಿಮಾನಿಗಳ ನಿರೀಕ್ಷೆ.

ಚಿತ್ರದಲ್ಲಿ ಪ್ರಭಾಸ್ ಮಾತ್ರವಲ್ಲದೇ ಶ್ರದ್ಧಾ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೀಲ್ ನಿತಿನ್ ಮುಕೇಶ್, ಜಾಕಿ ಶ್ರಾಫ್, ಮಂದಿರಾ ಬೇಡಿ, ಮಹೇಶ್ ಮಾಂಜ್ರೇಕರ್, ಚಂಕಿ ಪಾಂಡೆ ಚಿತ್ರದ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.