ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹೋ ಮೇಲೆ ಆರ್ಟ್‌ವರ್ಕ್‌ ಕದ್ದ ಆರೋಪ

Last Updated 31 ಆಗಸ್ಟ್ 2019, 8:24 IST
ಅಕ್ಷರ ಗಾತ್ರ

ಪ್ರಭಾಸ್‌ ನಟನೆಯ ‘ಸಾಹೋ’ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಫಸಲು ಕೊಯ್ಯುತ್ತಿದೆ. ಇದರಲ್ಲಿ ಬಾಲಿವುಡ್‌ ನಟೀಮಣಿಯರ ದಂಡೇ ಹೆಚ್ಚಿರುವುದು ವಿಶೇಷ. ₹ 350 ಕೋಟಿ ವೆಚ್ಚದಡಿ ನಿರ್ಮಾಣಗೊಂಡಿರುವ ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಅಸಲಿ ಸುದ್ದಿ ಅದಲ್ಲ!

‘ಸಾಹೋ’ ಚಿತ್ರತಂಡದ ಮೇಲೆ ಕಲಾಕೃತಿ ಕದ್ದ ಆರೋಪ ಕೇಳಿಬಂದಿದೆ. ಅನುಮತಿ ಇಲ್ಲದೆ ನನ್ನ ಆರ್ಟ್‌ವರ್ಕ್ ಅನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಬೆಂಗಳೂರು ಮೂಲದ ಚಿತ್ರ ಕಲಾವಿದೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಹೋದಲ್ಲಿ ಬಳಸಿರುವ ಕಲಾಕೃತಿ ಮತ್ತು ತಮ್ಮ ಮೂಲ ಕಲಾಕೃತಿ ಎರಡನ್ನೂ ಅವರು ಅಪ್‌ಲೋಡ್‌ ಮಾಡಿದ್ದಾರೆ.

‘ಅಂತರರಾಷ್ಟ್ರೀಯಮಟ್ಟದಲ್ಲಿ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡ ನನ್ನ ಕಲಾಕೃತಿಯನ್ನು ಸಾಹೋ ಚಿತ್ರತಂಡ ನನ್ನ ಅನುಮತಿ ಇಲ್ಲದೆ ಚಿತ್ರದಲ್ಲಿ ಬಳಸಿರುವುದು ಸರಿಯಲ್ಲ’ ಎಂದು ಕಲಾವಿದ ಶಿಲೋ ಶಿವ್ ಸುಲೇಮಾನ್‌ ಆರೋಪಿಸಿದ್ದಾರೆ.

ಸುಲೇಮಾನ್‌ ಅವರ ಹೇಳಿಕೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ‘ಇದೊಂದು ಗಂಭೀರ ಪ್ರಕರಣ. ಕಲಾವಿದನ ಶ್ರಮಕ್ಕೆ ಚಿತ್ರತಂಡ ಬೆಲೆ ನೀಡಿ ಗೌರವಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT