ಭಾನುವಾರ, ಮಾರ್ಚ್ 26, 2023
24 °C

ಚಿರು ಕಟುಂಬದ ಜೊತೆ ದೀಪಾವಳಿ ಆಚರಿಸಿದ ಸಾಯಿ ತೇಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ನಟ ಸಾಯಿ ಧರಂ ತೇಜ್‌ ಬೈಕ್‌ ಅಪಘಾತದ ಬಳಿಕ ಮೊದಲ ಬಾರಿಗೆ ಮೆಗಾಸ್ಟಾರ್‌ ಕುಟುಂಬದ ಜೊತೆ ಕಾಣಿಸಿಕೊಂಡಿದ್ದಾರೆ. 

ದೀಪಾವಳಿ ಹಬ್ಬವನ್ನು ಚಿರಂಜೀವಿ ಮನೆಯಲ್ಲಿ ಆಚರಿಸಿರುವ ಸಾಯಿ, ಇಡೀ ಕುಟುಂಬದವರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಸಾಯಿ ತೇಜ್‌ ಜೊತೆ ಒಂದೇ ಫ್ರೇಮಿನಲ್ಲಿ ಚಿರಂಜೀವಿ, ಪವನ್‌ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ವರುಣ್ ತೇಜ್, ವೈಷ್ಣವ್ ತೇಜ್‌, ಅಕಿರ, ನಾಗಬಾಬು ಇರುವ ಫೋಟೊವನ್ನು ಚಿರಂಜೀವಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

’ನಿಮ್ಮ ಹಾರೈಕೆಯಿಂದ ಸಾಯಿ ತೇಜ್ ಗುಣಮುಖನಾಗಿ ಮನೆಗೆ ಮರಳಿದ್ದಾನೆ, ಇದುವೇ ನಮ್ಮ ಕುಟುಂಬದ ನಿಜವಾದ ಹಬ್ಬ' ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

 ’ನಿಮ್ಮೆಲ್ಲರ ಆಶೀರ್ವಾದದಿಂದ ಸಾಯಿ ತೇಜ್‌ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ನಮ್ಮ ಕುಟುಂಬ ಸದಸ್ಯರ ಪಾಲಿಗೆ ಇದುವೇ ನಿಜವಾದ ಹಬ್ಬ'. ಎಂದು ಫೊಟೋ ಹಂಚಿಕೊಳ್ಳುವ ಮೂಲಕ ರಾಮ್ ಚರಣ್‌ ಟ್ವೀಟ್‌ ಮಾಡಿದ್ದಾರೆ.

ಸೆಪ್ಟೆಂಬರ್‌ 10ರ ರಾತ್ರಿ 8 ಗಂಟೆಗೆ ಮಾಧಾಪುರ್ ಕೇಬಲ್ ಸೇತುವೆ ಮೇಲೆ ತೇಜ್ ಚಲಾಯಿಸುತ್ತಿದ್ದ ಬೈಕ್ ಉರುಳಿ ಬಿದ್ದು, ಅವರಿಗೆ ಕೈಕಾಲು, ಪಕ್ಕೆಲುಬು ಸೇರಿದಂತೆ ದೇಹದ ನಾನಾ ಕಡೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಅಪೋಲೋ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು