ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಘಾರ್ಗಾ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಂ.ಶಶಿಧರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ನಿರ್ದೇಶಕರು ಈ ಕಥೆ ಹೇಳಿದ ತಕ್ಷಣ ನಟಿಸಬೇಕು ಅನಿಸಿತು. ನಾನು ಮೊದಲ ಸಲ ಇಂಥ ಭಿನ್ನ ಪಾತ್ರ ಮಾಡಿದ್ದೇನೆ. ಪತ್ತೆದಾರನ ಪಾತ್ರ. ಈ ಚಿತ್ರದ ನಿರ್ಮಾಪಕರು ಕನ್ನಡಕ್ಕೆ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಅವರು ಮತ್ತೆ ಸಿನಿಮಾ ನಿರ್ಮಾಣಕ್ಕೆ ಕೈಹಾಕಿರುವುದು ಖುಷಿಯಾಗಿದೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಇಂಥ ತಂಡಗಳು ಬೆಳೆಯಬೇಕು’ ಎಂದರು ಸಾಯಿಕುಮಾರ್.

ಈ ಹಿಂದೆ ‘ಜೋಗಿ’, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದ ಅಶ್ವಿನಿ ರಾಮ್ಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಯಕ ಅರುಣ್ಗೆ ರೆಹಾನ ಜೋಡಿಯಾಗಿದ್ದಾರೆ.

‘ಜನ ಮೆಚ್ಚುವಂಥ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ ಮೂರು ಗೆಟಪ್ಗಳಿವೆ. ಆ್ಯಕ್ಷನ್ ಜತೆಗೆ ಗಟ್ಟಿಯಾದ ಕಥೆ ಹೊಂದಿರುವ ಚಿತ್ರ. ಹಾರರ್, ಸಸ್ಪೆನ್ಸ್, ಥಿಲ್ಲರ್ ಅಂಶಗಳಿವೆ. ಇಲ್ಲಿ ‘ಘಾರ್ಗಾ’ ಎಂಬುದು ಒಂದು ಊರಿನ ಹೆಸರು. ಈ ಶೀರ್ಷಿಕೆ ಏಕೆ ಇಟ್ಟಿದ್ದು ಎಂಬುದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ. ಫೆ.6ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.

ಆರ್.ಪಿ.ಪಟ್ನಾಯಕ್ ಸಂಗೀತ, ಗುರುಪ್ರಸಾದ್ ಛಾಯಾಚಿತ್ರಗ್ರಹಣವಿದೆ. ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರ ಚಿತ್ರೀಕರಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.