ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಕ್ರಂ ವೇದಾ': ಸೈಫ್ ಅಲಿ ಖಾನ್‌ರ ಫಸ್ಟ್ ಲುಕ್ ಹಂಚಿಕೊಂಡ ಹೃತಿಕ್‌ ರೋಷನ್

Last Updated 24 ಫೆಬ್ರುವರಿ 2022, 7:26 IST
ಅಕ್ಷರ ಗಾತ್ರ

ಬೆಂಗಳೂರು: 2017ರಲ್ಲಿ ತೆರೆಕಂಡ ತಮಿಳು ಚಿತ್ರ ‘ವಿಕ್ರಂ ವೇದಾ’ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ನಟ ಹೃತಿಕ್ ರೋಷನ್, ಸೈಫ್‌ ಅಲಿ ಖಾನ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ.

ವಿಕ್ರಂ ವೇದಾ ಚಿತ್ರದಲ್ಲಿನ ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಅನ್ನು ಹೃತಿಕ್‌ ರೋಷನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೈಫ್‌ ಅವರು ಜೀನ್ಸ್, ಟೀ ಶರ್ಟ್ ಹಾಗೂ ಕಪ್ಪು ಕಣ್ಣಡಕವನ್ನು ಧರಿಸಿ ಒರಟು ನೋಟವನ್ನು ಬೀರಿದ್ದಾರೆ.

‘ಅತ್ಯುತ್ತಮ ನಟರಲ್ಲಿ ಒಬ್ಬರು’ ಎಂದು ಸೈಫ್ ಅವರ ಕುರಿತು ಹೃತಿಕ್‌ ಬರೆದುಕೊಂಡಿದ್ದಾರೆ.

‘ಹಲವು ವರ್ಷಗಳಿಂದ ನಾನು ಮೆಚ್ಚಿದ ಅತ್ಯುತ್ತಮ ನಟ ಮತ್ತು ಸಹೋದ್ಯೋಗಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಈ ಅನುಭವವನ್ನು ಖಂಡಿತವಾಗಿಯೂ ನಾನು ಸಂಭ್ರಮಿಸುತ್ತೇನೆ’ ಎಂದೂ ಹೃತಿಕ್‌ ತಿಳಿಸಿದ್ದಾರೆ.

'ವಿಕ್ರಂ ವೇದಾ' ಸಿನಿಮಾದ ಶೂಟಿಂಗ್‌ ನಡೆಯುತ್ತಿದ್ದು, ಸದ್ಯ ಸೈಫ್‌ ಅಲಿ ಖಾನ್‌ ಭಾಗದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ.

ಪುಷ್ಕರ್‌ ಗಾಯತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 'ವಿಕ್ರಂ ವೇದಾ’ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT