ಮಂಗಳವಾರ, ಮೇ 18, 2021
24 °C

ನಾಗಾ ಸಾಧು ವೇಷದಲ್ಲಿ ಸೈಫ್‌ ಅಲಿ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಸೈಫ್‌ ಅಲಿ ಖಾನ್‌ ನಟಿಸಿರುವ ‘ಲಾಲ್‌ ಕಪ್ತಾನ್‌’ ಸಿನಿಮಾವು ವಿಭಿನ್ನ ವೇಷಭೂಷಣ ಹಾಗೂ ಪೋಸ್ಟರ್‌ನಿಂದ ಈಗಾಗಲೇ ಅಭಿಮಾನಿಗಳನ್ನು ಚಿತ್ರಬಿಡುಗಡೆಗೆ ಕಾಯುವಂತೆ ಮಾಡಿದೆ.

ಈ ಹಿಂದೆ ಯಾವ ಸಿನಿಮಾದಲ್ಲೂ ಸೈಫ್‌ ಈ ರೀತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ, ಪ್ರತೀಕಾರ ತೀರಿಸಿಕೊಳ್ಳುವ ಥ್ರಿಲ್ಲರ್‌ ಸಿನಿಮಾ ಇದಾಗಿದ್ದು, ಸೈಫ್‌ ನಾಗಾ ಸಾಧುವಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ವರ್ಷಗಳಿಂದ ಸೈಫ್‌ ತಯಾರಿ ನಡೆಸಿದ್ದಾರೆ. ನಾಗಾಸಾಧುಗಳ ಜೀವನದ ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಸೈಫ್‌ ನಾಗಾಸಾಧುವಾಗಿ ಯಾಕೆ ನಟಿಸಿದ್ದಾರೆ, ಚಿತ್ರದ ಕತೆ ಏನು ಎಂಬ ಬಗ್ಗೆ ಚಿತ್ರತಂಡ ಎಲ್ಲೂ ಹೇಳಿಕೊಂಡಿಲ್ಲ. ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ ಹಾಗೂ ಟೀಸರ್‌ಗಳು ಸಹ ಚಿತ್ರದ ಕುರಿತು ಕುತೂಹಲವನ್ನು ಹೆಚ್ಚು ಮಾಡಿವೆ.

ಇದನ್ನೂ ಓದಿ: ವೆಬ್ ಸೀರಿಸ್ ಪರಿಣಾಮ -ಸೈಫ್‌ ಆಲಿಖಾನ್ ಸಂಭಾವನೆ ಜಿಗಿತ‌

‘ಲಾಲ್‌ ಕಪ್ತಾನ್‌’ ಸಿನಿಮಾದ ಮತ್ತೊಂದು ಹೊಸ ಪೋಸ್ಟರ್‌ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಹಿಂದೆ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ಗಿಂತ ಇದರಲ್ಲಿ ಸೈಫ್‌, ನಾಗಾಸಾಧು ವೇಷದಲ್ಲಿ ಭಯಂಕರವಾಗಿ ಕಾಣುತ್ತಾರೆ. ಈ ಪೋಸ್ಟರ್‌ನಲ್ಲಿ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ತಂಡ ಮಾಹಿತಿ ನೀಡಿದ್ದು, ಅಕ್ಟೋಬರ್‌ 18ರಂದು ತೆರೆ ಕಾಣಲಿದೆ.

ಈ ಸಿನಿಮಾವನ್ನು ನವದೀಪ್‌ ಸಿಂಗ್‌ ನಿರ್ದೇಶನ ಮಾಡುತ್ತಿದ್ದು, ಇರೋಸ್‌ ಇಂಟರ್‌ನ್ಯಾಷನಲ್‌ ಹಾಗೂ ಆನಂದ್‌ ಎಲ್‌. ರಾಯ್‌ ಅವರ ಕಲರ್‌ ಯೆಲ್ಲೊ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು