ನವದೆಹಲಿ: ಮಾಸ್, ಆ್ಯಕ್ಷನ್ ಚಿತ್ರಗಳ ಅಬ್ಬರದ ನಡುವೆ ಬಾಲಿವುಡ್ನಲ್ಲಿ ಸದ್ಯ ರೊಮ್ಯಾಂಟಿಕ್ ಚಿತ್ರ ‘ಸೈಯಾರಾ’ ಸದ್ದು ಮಾಡುತ್ತಿದೆ.

ಅಹನ್ ಪಾಂಡೆ ಮತ್ತು ಅನೀತ್ ಪಡ್ಡಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹಿತ್ ಸೂರಿ ಅವರ ನಿರ್ದೇಶನದ ಈ ಚಿತ್ರ ಜುಲೈ18ರಂದು ತೆರೆಕಂಡಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ದೇಶದ ಬಾಕ್ಸ್ ಆಫೀಸ್ನಲ್ಲಿ ₹83 ಕೋಟಿ ಗಳಿಕೆ ಮಾಡಿದೆ.

ನಟ ಅಹನ್ ಪಾಂಡೆ ಮೊದಲ ಬಾರಿ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ, ನಟಿ ಅನೀತ್ ಪಡ್ಡಾ ಈ ಹಿಂದೆ ‘ಬಿಗ್ ಗರ್ಲ್ಸ್ ಡೋಂಟ್ ಕ್ರೈ’ ಮತ್ತು ಕಾಜೋಲ್ ನಟನೆಯ ‘ಸಲಾಮ್ ವೆಂಕಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಹನ್ ಪಾಂಡೆ ನಟಿ ಅನನ್ಯಾ ಪಾಂಡೆ ಅವರ ಸಹೋದರ

ರೊಮ್ಯಾಂಟಿಕ್ ಡ್ರಾಮಾ ಆಗಿರುವ ಸೈಯಾರಾದಲ್ಲಿ ಏಳು ಹಾಡುಗಳಿದ್ದು, ಸಾಚೇತ್–ಪರಂಪರಾ, ವಿಶಾಲ್ ಮಿಶ್ರಾ ಸೇರಿ ಹಲವರ ಸಂಗೀತವಿದೆ.

ಆಲಿಯಾ ಭಟ್ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡ ‘ಸ್ಟೂಡೆಂಟ್ ಆಫ್ ದಿ ಇಯರ್’, ಜಾಹ್ನವಿ ಕಪೂರ್ ಅವರ ‘ಧಡಕ್’ಗಿಂತ ಸೈಯಾರಾ ಚಿತ್ರ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿ ತಿಳಿಸಿದೆ.

ದೇಶದ ಬಾಕ್ಸ್ ಆಫೀಸ್ನಲ್ಲಿ ಡೆಂಟ್ ಆಫ್ ದಿ ಇಯರ್ ಚಿತ್ರ ₹70ಕೋಟಿ ಮತ್ತು ಧಡಕ್ 73 ಕೋಟಿ ಗಳಿಕೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.