ಭಾನುವಾರ, ಜೂಲೈ 5, 2020
24 °C

ಕಸ ಗುಡಿಸುತ್ತಿರುವ ಸಲ್ಮಾನ್: ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟ, ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ತನ್ನ ಪನ್ವೆಲ್‌ ಫಾರ್ಮ್‌ಹೌಸ್‌ನಲ್ಲಿ ಪೊರಕೆ ಹಿಡಿದು ಗುಡಿಸುತ್ತಿರುವ ವಿಡಿಯೊ ಈಗ ವೈರಲ್‌ ಆಗಿವೆ. 

ಲಾಕ್‌ಡೌನ್‌‌ ಘೋಷಣೆಯಾದಗಿನಿಂದಲೂ ಸಲ್ಮಾನ್‌ ಖಾನ್‌ ತಮ್ಮ ಫಾರ್ಮ್‌ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ. ಅವರ ಜೊತೆ ನಟಿಯರಾದ ಲೂಲಿಯಾ ವಂಥೂರ್‌, ಜಾಕ್ವೆಲಿನ್‌ ಫೆರ್ನಾಂಡಿಸ್‌ ಮೊದಲಾದವರು ಅಲ್ಲೇ ಉಳಿದುಕೊಂಡಿದ್ದಾರೆ. ವಿಶ್ವ ಪರಿಸರ ದಿನದಂದು ತನ್ನ ಫಾರ್ಮ್‌ಹೌಸ್‌ ತಾವೇ ಸ್ವತಃ ಕ್ಲೀನ್‌ ಮಾಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. #ಸ್ವಚ್ಛಭಾರತ#ವರ್ಲ್ಡ್‌ಎನ್ವಿರಾನ್‌ಮೆಂಟ್ ಹ್ಯಾಷ್‌ಟ್ಯಾಗ್‌ನಡಿ ವಿಡಿಯೊ ಹಂಚಿಕೊಂಡಿದ್ದು, ‘ಎಲ್ಲರೂ ಸ್ವಚ್ಛತಾ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ. 

ನಿಸರ್ಗ ಚಂಡಮಾರುತ ಸಲ್ಮಾನ್‌ನ ಪನ್ವೆಲ್‌ ಫಾರ್ಮ್‌ಹೌಸ್‌ನಲ್ಲಿ ಭಾರಿ ಅವಾಂತರವನ್ನೇ ಸೃಷ್ಟಿಸಿತ್ತು. ಜೋರು ಗಾಳಿ, ಮಳೆಗೆ ಮರಗಳ ಕೊಂಬೆಗಳು ಮುರಿದುಬಿದ್ದಿದ್ದವು. ಈ ವಿಡಿಯೊಗಳನ್ನು ಲೂಲಿಯಾ ವೆಂಥೂರ್‌ ಹಂಚಿಕೊಂಡಿದ್ದರು. 

ವೈರಲ್‌ ಆದ ವಿಡಿಯೊದಲ್ಲಿ ಕೆಲಸಗಾರರ ಜೊತೆ ಸಲ್ಮಾನ್‌ ಖಾನ್‌ ಹಾಗೂ ಲೂಲಿಯ ವಂಥೂರ್‌ ಪೊರಕೆ ಹಿಡಿದು ಫಾರ್ಮ್‌ಹೌಸ್‌ ಮಾರ್ಗಗಳನ್ನು ಗುಡಿಸುತ್ತಿದ್ದಾರೆ. ಟೀಶರ್ಟ್‌ ಹಾಗೂ ಡೆನಿಮ್‌ ಶಾರ್ಟ್ಸ್‌ ಧರಿಸಿಕೊಂಡು ಕೆಲಸಗಾರರ ಜೊತೆ ಸೇರಿಕೊಂಡು ಸಲ್ಮಾನ್‌ ಮಾಡುತ್ತಿರುವ  ಕೆಲಸಕ್ಕೆ ಬಾಲಿವುಡ್‌ ಮಂದಿ ಸೇರಿದಂತೆ ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 
 
 
 

 
 
 
 
 
 
 
 
 

#SwachhBharat #WorldEnvironmentDay Music Credits: Mark Mothersbaugh

A post shared by Salman Khan (@beingsalmankhan) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.