ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಲ್ಟಾ ಮಾಸ್ಕ್ ಧರಿಸಿ ಟ್ರೋಲ್‌ಗೆ ಒಳಗಾದ ಸಲ್ಮಾನ್ ಖಾನ್!

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಏನಾದರೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸಲ್ಮಾನ್ ಸುದ್ದಿಯಾಗಿದ್ದು ಮಾತ್ರ ಮಾಸ್ಕ್ ಧರಿಸಿದ್ದಕ್ಕೆ!

ಕೋವಿಡ್ 19 ನಿಯಮಗಳ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅದರಂತೆ ಸಲ್ಮಾನ್ ಕೂಡ ಮಾಸ್ಕ್ ಧರಿಸಿದ್ದಾರೆ.

ಆದರೆ ಮಾಸ್ಕ್ ಧರಿಸುವಾಗ ಉಲ್ಟಾ ಆಗಿ ಮಾಸ್ಕ್ ಧರಿಸಿ, ಎಡವಟ್ಟು ಮಾಡಿಕೊಂಡಿದ್ದಾರೆ.

ರಷ್ಯಾ ಮತ್ತು ಟರ್ಕಿಯಲ್ಲಿ ‘ಟೈಗರ್ 3’ ಸಿನಿಮಾದ ಚಿತ್ರೀಕರಣ ಮತ್ತು ಇತರ ಕೆಲಸಗಳನ್ನು ಮುಗಿಸಿ ಸಲ್ಮಾನ್ ಖಾನ್ ಮುಂಬೈಗೆ ವಾಪಸ್ ಆಗಿದ್ದಾರೆ.

ಹೀಗೆ ಬರುವಾಗ ಸಲ್ಮಾನ್ ಕಪ್ಪು ಬಣ್ಣದ ಟೋಪಿ, ಟಿ ಶರ್ಟ್ ಮತ್ತು ಬ್ಲೂ ಶರ್ಟ್ ಹಾಗೂ ಜೀನ್ಸ್ ಧರಿಸಿದ್ದರು. ಜತೆಗೆ ಅದಕ್ಕೆ ಹೊಂದುವಂತೆ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದರು. ಆದರೆ ಮಾಸ್ಕ್‌ನಲ್ಲಿದ್ದ ಅವರ ಹೆಸರಿನ ಇನಶಿಯಲ್ಸ್ ಇರುವ ಪ್ರಿಂಟ್ ‘ಎಸ್‌ಕೆ’ ಎಂದಿರುವುದನ್ನು ಅವರು ಉಲ್ಟಾ ಆಗಿ ಧರಿಸಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಸಲ್ಮಾನ್ ಮಾಸ್ಕ್ ವಿಚಾರವನ್ನಿಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT