ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂದಿನ ‘ರಾಧೆ’ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಸಲ್ಮಾನ್ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೊದಲ್ಲಿ ಜಾಕೆಟ್ ಧರಿಸಿ ಹಿಂಬದಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ರಾಧೆ ಚಿತ್ರಕ್ಕೆಪ್ರಭುದೇವ ನಿರ್ದೇಶನವಿದೆ.

54 ವರ್ಷದ ಸಲ್ಮಾನ್ ಲಾಕ್ಡೌನ್ಗೂ ಮೊದಲು ರಾಧೆ ಶೂಟಿಂಗ್ನಲ್ಲಿ ತೊಡಗಿದ್ದರು. ಲಾಕ್ಡೌನ್ ಅವಧಿಯಲ್ಲಿ ತಮ್ಮ ಫಾರ್ಮ್ಹೌಸ್ನಲ್ಲಿ ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದ ಈ ನಟ ಈಗ ಮರಳಿ ಸಿನಿಮಾ ಶೂಟಿಂಗ್ಗೆ ತೆರಳಿದ್ದಾರೆ.

ಶೂಟಿಂಗ್ ಸೆಟ್ನ ಫೋಟೊ ಹಂಚಿಕೊಳ್ಳುವ ಜೊತೆಗೆ ‘ಆರೂವರೆ ತಿಂಗಳ ಬಳಿಕ ಶೂಟಿಂಗ್ಗೆ ಮರಳಿದ್ದೇನೆ, ಖುಷಿ ಎನ್ನಿಸುತಿದೆ’ ಎಂದು ಬರೆದುಕೊಂಡಿದ್ದಾರೆ.

ರಾಧೆ ಸಿನಿಮಾದಲ್ಲಿ ಸಲ್ಮಾನ್ಗೆ ದಿಶಾ ಪಟಾನಿ ಜೋಡಿಯಾಗಲಿದ್ದಾರೆ. ಲಾಕ್ಡೌನ್ಗೂ ಮೊದಲು ಮೇ 22ಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಆದರೆ ಲಾಕ್ಡೌನ್ ಕಾರಣದಿಂದ 2 ಹಾಡುಗಳು ಹಾಗೂ ಕೆಲ ಸೀನ್ಗಳ ಶೂಟಿಂಗ್ಗಳು ಬಾಕಿ ಉಳಿದಿದ್ದವು. ಆ ಕಾರಣಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ.

ಇದರೊಂದಿಗೆ ಸಲ್ಮಾನ್ ಬಿಗ್ ಬಾಸ್ನ 14ನೇ ಆವೃತ್ತಿಯ ಶೂಟಿಂಗ್ ಅನ್ನು ಕೂಡ ಆರಂಭಿಸಿದ್ದಾರೆ. ಕಲರ್ಸ್ನಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಪ್ರತಿ ಶನಿವಾರ ರಾತ್ರಿ ಪ್ರಸಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.