ಇತ್ತೀಚೆಗಷ್ಟೇ ಹಸೆಮಣೆ ಏರಿದ್ದ ನಟಿ ಸಮಂತಾ ರುತ್ ಪ್ರಭು ನಟನೆಯ ಹೊಸ ತೆಲುಗು ಸಿನಿಮಾ ಘೋಷಣೆಯಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಸಿನಿಮಾದ ಕಥೆಯನ್ನು ಸಮಂತಾ ಪತಿ, ನಿರ್ದೇಶಕ ರಾಜ್ ನಿಧಿಮೋರು ಅವರೇ ಬರೆದಿದ್ದಾರೆ. ರಾಜ್ ಈ ಹಿಂದೆ ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ, ‘ಗೋ ಗೋವಾ ಗಾನ್’ ಹಾಗೂ ‘ಎ ಜೆಂಟಲ್ಮ್ಯಾನ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಈಗ’, ‘ರಂಗಸ್ಥಳಂ’, ‘ಸೂಪರ್ ಡಿಲಕ್ಸ್’, ‘ದೂಕುಡು’, ‘ಅತ್ತರಿಂಟಿಕಿ ದಾರಿದಿ’, ‘ಥೆರಿ’ ಹೀಗೆ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಮಂತಾ ‘ಫ್ಯಾಮಿಲಿ ಮ್ಯಾನ್–2’ ವೆಬ್ ಸರಣಿಯಲ್ಲಿ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಮಾ ಇಂಟಿ ಬಂಗಾರಂ’ ಸಿನಿಮಾವೂ ಫ್ಯಾಮಿಲಿ ಕಥೆಯ ಜೊತೆಗೆ ಆ್ಯಕ್ಷನ್ ಜಾನರ್ ಹೊಂದಿರುವ ಸುಳಿವನ್ನು ಚಿತ್ರದ ಪೋಸ್ಟರ್ ನೀಡಿದೆ. ಸಿನಿಮಾವನ್ನು ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಚಿತ್ರದ ಟ್ರೇಲರ್ ಜ.9ರಂದು ಬಿಡುಗಡೆಯಾಗಲಿದೆ.

ಕಳೆದ ಡಿ.2ರಂದು ಸಮಂತಾ–ರಾಜ್ ಮದುವೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.