ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ : ನಟಿ ಸಮಂತಾ

Last Updated 10 ಏಪ್ರಿಲ್ 2023, 11:09 IST
ಅಕ್ಷರ ಗಾತ್ರ

ಬಿಡುಗಡೆಗೆ ಸಜ್ಜಾಗಿರುವ ತಮ್ಮ 'ಶಾಕುಂತಲಂ' ಚಿತ್ರದ ಕುರಿತು ನಟಿ ಸಮಂತಾ ರುತ್ ಪ್ರಭು ಅವರು ಟ್ವೀಟರ್‌ನಲ್ಲಿ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದಾರೆ. ಈ ವೇಳೆ, ತಮ್ಮ ಬದುಕಿನ ಸವಾಲುಗಳನ್ನು ಎದುರಿಸಿ ಯಶಸ್ಸು ಕಾಣುತ್ತಿರುವ ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರ ನೀಡಿದ ಸಮಂತಾ, 'ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಪೌರಾಣಿಕ ಕಥೆಯ ಪಾತ್ರಧಾರಿ ಶಾಕುಂತಲಾ ಹಾಗೆ ಜೀವನ ಮುಗಿಯಬಾರದು ಎಂದು ಉತ್ತರಿಸಿದ್ದಾರೆ.

ಭಾನುವಾರ ತಮ್ಮ ಟ್ವೀಟರ್ ಹ್ಯಾಂಡಲ್‌ನಲ್ಲಿ 'ಆಸ್ಕ್ ಸ್ಯಾಮ್' ಎಂದು ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಕೆಲಹೊತ್ತಿನಲ್ಲೇ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗರೆದರು. ಈ ನಡುವೆಯೇ ಒಬ್ಬರು, 'ಹಲವಾರು ಸಂಕಷ್ಟಗಳನ್ನು ಎದುರಿಸಿಯೂ ನೀವು ಹೇಗೆ ಸಮರ್ಥವಾಗಿ ಮುಂದೆ ಸಾಗುತ್ತಿದ್ದೀರಿ? ಇಷ್ಟು ಶಕ್ತಿ ಸಾಮರ್ಥ್ಯ ಎಲ್ಲಿಂದ ದಕ್ಕಿತು?' ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, 'ಏಕೆಂದರೆ ನನ್ನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ. #ಶಾಕುಂತಲಾ' ಎಂದು ಬರೆದುಕೊಂಡಿದ್ದಾರೆ.

'ಸೀತಾ ರಾಮನ್' ಖ್ಯಾತಿಯ ಮೃಣಾಲ್ ಠಾಕೂರ್ ಕೂಡ ಸಮಂತಾಗೆ ಪ್ರಶ್ನೆ ಕೇಳಿದ್ದು ವಿಶೇಷವಾಗಿತ್ತು. 'ನಾವಿಬ್ಬರು ಯಾವಾಗ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತೇವೆ' ಎಂದು ಪ್ರಶ್ನಿಸಿದ್ದಾರೆ. ಮೃಣಾಲ್ ಮುಂದಿನ ಸಿನಿಮಾ ಗುಮ್ರಾಹ್ ಗೆ ಶುಭ ಕೋರಿ ಪ್ರತಿಕ್ರಿಯಿಸಿದ ಸಮಂತಾ, 'ಈ ಯೋಚನೆ ಇಷ್ಟವಾಯಿತು. ಜೊತೆಗೆ ಕೆಲಸ ಮಾಡೋಣ' ಎಂದಿದ್ದಾರೆ.

ಸಮಂತಾ ಹಾಗೂ ದೇವ್ ಮೋಹನ್ ನಟನೆಯ ಶಾಕುಂತಲಾ ಏ.14ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT