‘ನೀವು ಮಕ್ಕಳನ್ನು ಪಡೆಯಲು ಯಾವಾಗ ಪ್ಲಾನ್ ಮಾಡಿದ್ದೀರಿ’

–ಹಸೆಮಣೆ ಏರಿದ ನಟೀಮಣಿಯರಿಗೆ ಅವರು ಹೋದ ಕಡೆಯಲ್ಲೆಲ್ಲಾ ಎದುರಾಗುವ ಸಾಮಾನ್ಯ ಪ್ರಶ್ನೆ ಇದು. ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿಗೂ ಇಂತಹದ್ದೇ ಪ್ರಶ್ನೆ ಎದುರಾಗುತ್ತಿದೆಯಂತೆ. ಆಕೆ ನಟ ನಾಗಚೈತನ್ಯ ಜೊತೆಗೆ ಗೋವಾದಲ್ಲಿ ಸಪ್ತಪದಿ ತುಳಿದಿದ್ದು 2017ರ ಅಕ್ಟೋಬರ್‌ನಲ್ಲಿ.

ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಟ್ಟಿಗೆ ನಡೆಸಿದ (#AskSamantha session) ಸಂವಾದದಲ್ಲಿ ಅಭಿಮಾನಿಯೊಬ್ಬರು, ‘ನೀವು ತಾಯ್ತನದ ಸುಖ ಅನುಭವಿಸುವುದು ಯಾವಾಗ’ ಎನ್ನುವ ಪ್ರಶ್ನೆ ಮುಂದಿಟ್ಟರಂತೆ. ‘ನಾನು 2017ರಿಂದಲೂ ಗರ್ಭಿಣಿಯಾಗಿದ್ದೇನೆ. ಆದರೆ, ನನ್ನ ಮಗು ಹೊಟ್ಟೆಯಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ’ ಎಂದು ಸಮಂತಾ ಅಭಿಮಾನಿಯ ಪ್ರಶ್ನೆಗೆ ವಿಡಂಬನಾತ್ಮಕವಾಗಿ ಉತ್ತರಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಅಭಿಮಾನಿಯೊಬ್ಬರು ಕೇಳಿದ್ದ ಇದೇ ಪ್ರಶ್ನೆಗೆ ‘2022ರ ಆಗಸ್ಟ್ 7ರಂದು ಬೆಳಿಗ್ಗೆ 7ಗಂಟೆಗೆ ನಾನು ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ಆಕೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.

ಸಮಂತಾ ದಕ್ಷಿಣಭಾರತ ಚಿತ್ರರಂಗದ ಪ್ರಸಿದ್ಧ ನಟಿ. ಮದುವೆಯಾದ ಬಳಿಕವೂ ಆಕೆಯ ಬೇಡಿಕೆ ಕುಗ್ಗಿಲ್ಲ. ಹಿಂದಿಯ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲೂ ನಟಿಸಿದ್ದು, ಇದರ ಡಬ್ಬಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅಲ್ಲದೇ, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿಯೇ, ನಾಗಚೈತನ್ಯ ಮತ್ತು ಸಮಂತಾ ಜೋಡಿ ಮಗು ಪಡೆಯುವುದನ್ನು ಮುಂದೂಡುತ್ತಿದೆ ಎನ್ನುವುದು ಅವರ ಅಭಿಮಾನಿಗಳ ಹೇಳಿಕೆ.

ಸಿನಿಮಾ ಜಗತ್ತಿನಲ್ಲಿ ಈಗ ಅಮ್ಮಂದಿರಾಗುತ್ತಿರುವ ನಟಿಯರ ಪಟ್ಟಿ ಬೆಳೆಯುತ್ತಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಅನುಷ್ಕಾ ಶರ್ಮ ಕೂಡ ಮೊದಲ ಮಗುವಿನ ಖುಷಿಯಲ್ಲಿರುವ ಸುದ್ದಿ ಹೊರಬಿದ್ದಿದೆ. ಹಾಗಾಗಿ, 33 ವರ್ಷದ ಸಮಂತಾ ತನ್ನ ಕುಟುಂಬಕ್ಕೆ ಹೊಸ ಸುದ್ದಿ ನೀಡುವುದು ಯಾವಾಗ ಎಂಬುದು ಟಾಲಿವುಡ್ ಅಂಗಳದ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.