ನಟಿ ಸಮೀರಾ ರೆಡ್ಡಿ ಶುಕ್ರವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಮುದ್ದಾದ ಕೈಗಳನ್ನು ಹಿಡಿದುಕೊಂಡಿರುವ ಫೋಟೊವೊಂದನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ನಮ್ಮ ಪುಟ್ಟ ದೇವತೆ ಬಂದಿದ್ದಾಳೆ, ಎಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

2013ರಲ್ಲಿ ತೆರೆಕಂಡ ‘ವರದನಾಯಕ’ ಸಿನಿಮಾದಲ್ಲಿ ನಟ ಸುದೀಪ್ ಅವರ ಜೊತೆ ನಾಯಕಿಯಾಗಿ ನಟಿಸಿದ್ದರು.ಅದು ಅವರ ಚೊಚ್ಚಲ ಚಿತ್ರವಾಗಿತ್ತು. ಅದರಲ್ಲಿ ‘ವರದನಾಯಕ’ನ ಪತ್ನಿಯಾಗಿ ಮಿಂಚಿದ್ದ ಅವರೀಗ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಉದ್ಯಮಿ ಅಕ್ಷಯ್ ವಾರ್ಡೆ ಜೊತೆ 2014ರಲ್ಲಿ ಸಪ್ತಪದಿ ತುಳಿದಿದ್ದ ಅವರು ವಿವಾಹದ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.2015ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹ್ಯಾನ್ಸ್ ವಾರ್ಡೆ ಎಂಬ ನಾಲ್ಕು ವರ್ಷದ ಮಗನಿದ್ದಾನೆ. ಎರಡನೇ ಬಾರಿ ಗರ್ಭಿಣಿಯಾಗಿದ್ದಾಗಪ್ರೆಗ್ನೆನ್ಸಿ ಫೋಟೊಶೂಟ್ ಮೂಲಕ ಸುದ್ದಿಯಾಗಿದ್ದರು. ಈಚೆಗೆ
ಮೇಕಪ್ ರಹಿತವಾಗಿ ಕಾಣಿಸಿಕೊಂಡಿದ್ದ ವಿಡಿಯೊವೊಂದನ್ನು ಅವರು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ನೀರಿನೊಳಗೆ ಪ್ರೆಗ್ನೆನ್ಸಿಫೋಟೊಶೂಟ್ ಮಾಡಿಸಿ ಅವರು ಸುದ್ದಿಯಾಗಿದ್ದರು. ಪಿಂಕ್ ಹಾಗೂ ತಿಳಿ ಹಸಿರು ಬಣ್ಣದ ಬಿಕಿನಿ ತೊಟ್ಟು ನೀರಿನಲ್ಲಿ ಈಜಾಡುತ್ತಾ ತೆಗೆಸಿಕೊಂಡಿದ್ದ ಚಿತ್ರಗಳನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.