ಮುಂಬೈ: ಬಾಲಿವುಡ್ ಬೆಡಗಿ ಸನಾ ಖಾನ್ ಮತ್ತು ನೃತ್ಯ ನಿರ್ದೇಶಕ ಮೆಲ್ವಿನ್ ಲೂಯಿಸ್ ನಡುವಿನ ಸಂಬಂಧಕ್ಕೆ ಫುಲ್‌ಸ್ಟಾಪ್ ಬಿದ್ದಿದೆ.

ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಹಾಗೂ ಬಾಲಿವುಡ್ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸನಾ ಖಾನ್ ಮುಂಬೈ ಮೂಲದ ನೃತ್ಯ ನಿರ್ದೇಶದ ಮೆಲ್ವಿನ್ ಲೂಯಿಸ್ ಅವರೊಂದಿಗೆ ಕಳೆದೊಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದರು. ಅದ್ಯಾಕೊ ಎರಡು ತಿಂಗಳಿಂದ ಮುನಿಸಿಕೊಂಡಿದ್ದ ಈ ಕ್ಯೂಟ್ ಜೋಡಿ ಅಂತಿಮವಾಗಿ ಬೇರೆಯಾಗಿದೆ. ಇದನ್ನು ಸ್ವತಹ ಸನಾ ಖಾನ್ ಅವರೇ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ‘ನನ್ನ ಮತ್ತು ಮೆಲ್ವಿನ್ ನಡುವಿನ ಸಂಬಂಧ ಮುರಿದು ಬಿದ್ದಿದೆ, ಮೆಲ್ವಿನ್ ನನಗೆ ಮೋಸ ಮಾಡಿದ್ದಾನೆ, ಈ ದುಃಖದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದು, ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಒಮ್ಮೆ ಮೆಲ್ವಿನ್‌ನ ಮೊಬೈಲ್ ಫೋನ್ ತೆಗೆದಕೊಂಡೆ, ಕೂಡಲೇ ಅವನು ನನ್ನಿಂದ ಫೋನ್ ಕಸಿದುಕೊಂಡು ಮೆಸೇಜ್‌ಗಳನ್ನು ಡಿಲೀಟ್ ಮಾಡಿದ. ಆಗ ನನಗೆ ಅವನ ಮೇಲೆ ಅನುಮಾನ ಬಂದಿತು. ಕೂಡಲೇ ಅವನಿಂದ ಸಂಪರ್ಕ ಕಡಿದುಕೊಂಡೇ ಎಂದು ಸನಾ ವಿವರಿಸಿದ್ದಾರೆ.

ಮೆಲ್ವಿನ್ ದೂರವಾಗಿದ್ದು ಒಳ್ಳೆಯದಾಯಿತು, ಅವನವಿಷದ ಸಂಬಂಧದಿಂದ ದೇವರು ನನ್ನ ಪಾರು ಮಾಡಿದ್ದಾನೆ ಎಂದು ಸನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.