ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರಕಾಂಡ’ದ ಲಚ್ಚಿ–ಮಲ್ಲಿಗೆ

Published 19 ಏಪ್ರಿಲ್ 2024, 0:04 IST
Last Updated 19 ಏಪ್ರಿಲ್ 2024, 0:04 IST
ಅಕ್ಷರ ಗಾತ್ರ

ನಟ ‘ಡಾಲಿ’ ಧನಂಜಯ ನಟನೆಯ, ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ವಿಜಯಪುರದಲ್ಲಿ ಆರಂಭವಾಗಿದೆ. ಇದೇ ವೇಳೆ ಚಿತ್ರತಂಡ ತನ್ನ ತಾರಾಬಳಗವನ್ನು ಪರಿಚಯಿಸಲಾರಂಭಿಸಿದೆ. 

‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ಚೈತ್ರಾ ಜೆ.ಆಚಾರ್‌ ‘ಲಚ್ಚಿ’ಯಾಗಿ ಈ ಸಿನಿಮಾದಲ್ಲಿ ನಟಿಸಲಿದ್ದು, ಭಿನ್ನವಾದ ಪಾತ್ರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ‘ತಲೆದಂಡ’ ಸಿನಿಮಾ ಬಳಿಕ ಚೈತ್ರಾ ಸಿನಿಗ್ರಾಫ್‌ ಏರುಗತಿಯಲ್ಲಿದ್ದು, ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ‘ಬ್ಲಿಂಕ್’ನಲ್ಲಿ ‘ದೇವಕಿ ಅರಸ್‌’ ಎಂಬ ಪಾತ್ರದಲ್ಲಿ ಮಿಂಚಿದ್ದರು. ಚೈತ್ರಾ ನಟನೆಯ ‘ಹ್ಯಾಪಿ ಬರ್ತ್‌ಡೇ ಟು ಮಿ’, ಪರಂವಃ ನಿರ್ಮಾಣದ ‘ಸ್ಟ್ರಾಬೆರಿ’ ರಿಲೀಸ್‌ಗೆ ಸಜ್ಜಾಗುತ್ತಿವೆ. ಇದೇ ಹೊಸ್ತಿಲಲ್ಲಿ ಅವರು ‘ಉತ್ತರಕಾಂಡ’ ಸೆಟ್‌ಗೂ ಹೆಜ್ಜೆ ಇಟ್ಟಿದ್ದಾರೆ.  

ಯಾರು ಮಿರ್ಚಿ ಮಲ್ಲಿಗೆ?: ‘ಉತ್ತರಕಾಂಡ’ ಸಿನಿಮಾ ಘೋಷಣೆಯಾದ ಸಂದರ್ಭದಲ್ಲೇ ಚಂದನವನದ ‘ದೂದ್‌ಪೇಡಾ’ ದಿಗಂತ್‌ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸೂಚನೆ ಸಿಕ್ಕಿತ್ತು. ಇದೀಗ ಅವರ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ. ‘ಮಿರ್ಚಿ ಮಲ್ಲಿಗೆ’ ಎಂಬ ಪಾತ್ರದಲ್ಲಿ ದಿಗಂತ್‌ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ‘ಲವ್ ಮತ್ತ್ ಗುಟ್ಕಾ ಜೀವಕ್ಕ್ ಅನಾಹುತ ಹೆಂಗ ಹಂಗಾ ದೂದ್ ಪೇಡಾ ದಿಗಂತ್ ಇಗ್ ಮಿರ್ಚಿ ಮಲ್ಲಿಗಿ ಉತ್ತರಕಾಂಡ ಪಿಚ್ಚರದಾಗ’ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ. 

‘ಉತ್ತರಕಾಂಡ’ ಒಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. 

ದಿಗಂತ್‌
ದಿಗಂತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT