ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೈರ್‌ಫ್ಲೈ’ನಲ್ಲಿ ಸುಧಾರಾಣಿ

Published 1 ಜುಲೈ 2024, 0:50 IST
Last Updated 1 ಜುಲೈ 2024, 0:50 IST
ಅಕ್ಷರ ಗಾತ್ರ

ನಟಿ ಸುಧಾರಾಣಿ ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿಕೊಂಡಿದ್ದಾರೆ. ವಂಶಿ ಈ ಚಿತ್ರದ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಅವರು ಈ ತಂಡ ಸೇರಿಕೊಂಡಿದ್ದರು.

ಸುಧಾರಾಣಿ ನಾಯಕನ ತಾಯಿಯಾಗಿ ಪದ್ಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಬೆಂಬಲವಿರುತ್ತದೆ. ಅದು ನನ್ನ ತವರು ಮನೆ. ಹಾಗಾಗಿ ಇವತ್ತಿಗೂ ಆ ನಿರ್ಮಾಣ ಸಂಸ್ಥೆಯಿಂದ ಚಿಕ್ಕ ಪಾತ್ರ ನೀಡಿದರೂ ಮಾಡುತ್ತೇನೆ. ಇಡೀ ಕುಟುಂಬ ಕುಳಿತುಕೊಂಡು ನೋಡಿ, ಇಷ್ಟಪಡುವ ಸಿನಿಮಾವಿದು’ ಎಂದಿದ್ದಾರೆ ಸುಧಾರಾಣಿ.

ಅಭಿಲಾಷ್ ಕಲ್ಲಟ್ಟಿ ಛಾಯಾಚಿತ್ರಗ್ರಹಣ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ರಘು ನಿಡುವಳ್ಳಿ ಸಂಭಾಷಣೆಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ದೀಪಾವಳಿ ವೇಳೆಗೆ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT