ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಡಾರ್ಲಿಂಗ್‌ ಕೃಷ್ಣಗೆ ಪಿ.ಸಿ.ಶೇಖರ್‌ ಆ್ಯಕ್ಷನ್‌ ಕಟ್‌

Published : 31 ಆಗಸ್ಟ್ 2021, 9:30 IST
ಫಾಲೋ ಮಾಡಿ
0
ಡಾರ್ಲಿಂಗ್‌ ಕೃಷ್ಣಗೆ ಪಿ.ಸಿ.ಶೇಖರ್‌ ಆ್ಯಕ್ಷನ್‌ ಕಟ್‌
ಡಾರ್ಲಿಂಗ್‌ ಕೃಷ್ಣ ಹಾಗೂ ಪಿ.ಸಿ.ಶೇಖರ್‌ 

ಲವ್‌ ಮಾಕ್ಟೆಲ್‌ ಚಿತ್ರದ ಯಶಸ್ಸಿನ ಬಳಿಕ ನಟ ಡಾರ್ಲಿಂಗ್‌ ಕೃಷ್ಣ ಅವರನ್ನುರೊಮ್ಯಾಂಟಿಕ್‌ ಸಿನಿಮಾಗಳೇ ಅರಸಿಕೊಂಡು ಬರುತ್ತಿವೆ. ಇದೀಗರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರ ಹೊಂದಿರುವ ಪಿ.ಸಿ.ಶೇಖರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಕೃಷ್ಣ ಅವರು ನಾಯಕರಾಗಿ ನಟಿಸುತ್ತಿದ್ದಾರೆ.

ADVERTISEMENT
ADVERTISEMENT

‘ರೋಮಿಯೋ’, ‘ಚಡ್ಡಿದೋಸ್ತ್‌’, ‘ಅರ್ಜುನ’,‘ಸ್ಟೈಲ್‌ ಕಿಂಗ್‌’, ‘ದಿ ಟೆರರಿಸ್ಟ್‌’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಶೇಖರ್‌ ತಮ್ಮ ಮುಂದಿನ ಪ್ರೊಜೆಕ್ಟ್‌ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಹೊಸ ಚಿತ್ರವನ್ನು ಕಡ್ಡಿಪುಡಿ ಚಂದ್ರು ಅವರು ನಿರ್ಮಾಣ ಮಾಡುತ್ತಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ‘ರೋಮಿಯೋ’ ಬಳಿಕ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾಗಳಿಂದ ಶೇಖರ್‌ ದೂರಸರಿದಿದ್ದರು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ರೊಮ್ಯಾಂಟಿಕ್‌ ವಿಷಯಾಧಾರಿದ ಚಿತ್ರ ನಿರ್ದೇಶನಕ್ಕೆ ಶೇಖರ್‌ ಇಳಿದಿದ್ದಾರೆ. ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ.

ಡಾರ್ಲಿಂಗ್‌ ಕೃಷ್ಣ ಅವರ ‘ಶುಗರ್‌ ಫ್ಯಾಕ್ಟರಿ’, ‘‘srikrishna@gmail.com’, ‘ಮಿ.ಬ್ಯಾಚುಲರ್‌’ ಚಿತ್ರಗಳ ಚಿತ್ರೀಕರಣ ಪೂರ್ಣಗೊಂಡಿದೆ. ‘ಲವ್‌ ಮಾಕ್ಟೆಲ್‌–2’ ಚಿತ್ರವನ್ನೂ ಈ ವರ್ಷವೇ ತೆರೆಗೆ ತರಲು ಅವರು ಸಿದ್ಧತೆ ನಡೆಸಿದ್ದಾರೆ. ಜೊತೆಗೆರಚಿತಾ ರಾಮ್‌ ಜೊತೆಗೆ ನಟಿಸುತ್ತಿರುವ ‘ಲವ್‌ ಮಿ OR ಹೇಟ್‌ ಮಿ’ ಚಿತ್ರವೂ ಸೆಟ್ಟೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0