ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಲು ಸಜ್ಜಾದ ‘ಚೌಕಿದಾರ್‌’: ಪೃಥ್ವಿ ಅಂಬಾರ್‌ಗೆ ಧನ್ಯ ಜೋಡಿ

Published 1 ಜುಲೈ 2024, 18:42 IST
Last Updated 1 ಜುಲೈ 2024, 18:42 IST
ಅಕ್ಷರ ಗಾತ್ರ

‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ನಟನೆಯ ‘ಚೌಕಿದಾರ್‌’ ಸಿನಿಮಾ ಸೆಟ್ಟೇರಲು ಸಜ್ಜಾಗುತ್ತಿದ್ದು, ನಟಿ ಧನ್ಯ ರಾಮ್‌ಕುಮಾರ್‌ ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. 

‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರೂ ನಟಿಸುತ್ತಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಧನ್ಯ, ಇತ್ತೀಚೆಗಷ್ಟೇ ‘ದ ಜಡ್ಜ್‌ಮೆಂಟ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ‘ಕಾಲಪತ್ತರ್’ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ‘ಚೌಕಿದಾರ್’ ಬಳಗ ಸೇರಿಕೊಂಡಿದ್ದಾರೆ. ಬಹುಭಾಷೆಯಲ್ಲಿ ಮೂಡಿಬರಲಿರುವ ‘ಚೌಕಿದಾರ್‌’ ಸಿನಿಮಾದಲ್ಲಿ ಭಿನ್ನ ಪಾತ್ರದ ಮೂಲಕ ಪೃಥ್ವಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ‘ಸಿನಿಮಾಗಳಲ್ಲಿ ಲವರ್‌ಬಾಯ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಈ ಚಿತ್ರದಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹಾಗೆಂದು ‘ಚೌಕಿದಾರ್’ ಸಂಪೂರ್ಣ ಆ್ಯಕ್ಷನ್‌ ಸಿನಿಮಾವಲ್ಲ. ಇದು ಫ್ಯಾಮಿಲಿ ಎಂಟರ್‌ಟೈನರ್‌’ ಎಂದಿದೆ ಚಿತ್ರತಂಡ. 

ವಿದ್ಯಾ ಶೇಖರ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ಜೂನ್‌ 3ರಂದು ಚಿತ್ರ ಮುಹೂರ್ತ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT