ಸ್ಟಾರ್ ನಟರ ಸಿನಿಮಾಗಳಿಲ್ಲದ ಅವಧಿಯಲ್ಲಿ ಚಂದನವನದಲ್ಲಿ ಹೊಸಬರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಇಂದು (ಮೇ 17) ಎರಡು ಸಿನಿಮಾಗಳು ತೆರೆಗೆ ಬಂದಿವೆ.

‘ದಿ ಸೂಟ್’: ‘ಸೂಟ್’ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸುಜಯ್ ಆರ್ಯ ಅಭಿನಯಿಸಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಸುಜಯ್ ಆರ್ಯ ಈ ಹಿಂದೆ ರಾಮನಾಥ್ ಋಗ್ವೇದಿ ನಿರ್ದೇಶನದ ‘ಅಧಿಕಾರ’ ಚಿತ್ರದಲ್ಲಿ ನಟಿಸಿದ್ದರು. ಭಗತ್ ರಾಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಕಮಲ್, ಸುಜಯ್, ಮಂಜುನಾಥ್ ಪಾಟೀಲ್, ದೀಪ್ತಿ ಕಾಪ್ಸೆ, ಕುಸುಮ ರಾಮಯ್ಯ, ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

‘ರಣಹದ್ದು’: ಪ್ರಸನ್ನ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಶಾಂಕ್ ಹಾಗೂ ಸೂರಜ್ ನಟಿಸಿದ್ದಾರೆ. ಇವರಿಬ್ಬರೂ ಪ್ರಸನ್ನ ಕುಮಾರ್ ಅವರ ಪುತ್ರರು. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಹಣವಿಲ್ಲದ ಮನುಷ್ಯರನ್ನು ಸಮಾಜ ಹೇಗೆ ನೋಡುತ್ತದೆ ಎಂಬುವುದು ಚಿತ್ರದ ಕಥಾಹಂದರ ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.