ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷದ ಬಳಿಕ ದೆಹಲಿಗೆ ಕಿಚ್ಚನ ಭೇಟಿ: ವಿಕ್ರಾಂತ್ ರೋಣ ಪ್ರಚಾರ ಹೇಗಿದೆ ಗೊತ್ತಾ?

ಅಕ್ಷರ ಗಾತ್ರ

‌ನವದೆಹಲಿ: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆಗೆ ಸಜ್ಜಾಗಿದೆ.

ಜುಲೈ 28ರಂದು ವಿಶ್ವದಾದ್ಯಂತ ‘ವಿಕ್ರಾಂತ್‌ ರೋಣ’ ಸಿನಿಮಾ 3ಡಿಯಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಜೊತೆ ಕಿಚ್ಚ ಸುದೀಪ್ ಕೂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಶುಕ್ರವಾರ ದೆಹಲಿಗೆ ಭೇಟಿ ನೀಡಿದ್ದ ಚಿತ್ರತಂಡ ‘ವಿಕ್ರಾಂತ್‌ ರೋಣ’ ಕುರಿತು ಭರ್ಜರಿ ಪ್ರಚಾರ ನಡೆಸಿದೆ. ಕಾರ್ಯಕ್ರಮದ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದಶಕದ ಬಳಿಕಕಿಚ್ಚ ಸುದೀಪ್ ಸಿನಿಮಾ ಪ್ರಚಾರ ನಿಮಿತ್ತ ದೆಹಲಿಗೆ ಭೇಟಿ ನೀಡಿರುವುದು ವಿಶೇಷ.

ಓದಿ...ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿಯಾದ ನಟ ಸುದೀಪ್: ಹಲವು ವಿಚಾರಗಳ ಬಗ್ಗೆ ಚರ್ಚೆ

2012ರಲ್ಲಿ ಎಸ್‌.ಎಸ್‌.ರಾಜಮೌಳಿ ನಿರ್ದೇಶನ, ಕಿಚ್ಚ ಸುದೀಪ್, ನಾನಿ, ಸಮಂತ ನಟನೆಯ ‘ಈಗ’ ಸಿನಿಮಾದ ಪ್ರಚಾರದ ಅಂಗವಾಗಿ ದೆಹಲಿಗೆ ಭೇಟಿ ನೀಡಿದ್ದರು.

ಸುದೀಪ್ ಅವರು ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು
ಸುದೀಪ್ ಅವರು ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು

ಅನೂಪ್‌ ಭಂಡಾರಿ ನಿರ್ದೇಶನದ ‘ವಿಕ್ರಾಂತ್‌ ರೋಣ’ ಸಿನಿಮಾ ಹಿಂದಿ, ಮಲಯಾಳಂ, ತೆಲುಗು, ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ಡಬ್‌ ಆಗಿದೆ. ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾವನ್ನು ಜೀ ಸ್ಟುಡಿಯೊ ಮತ್ತು ಕಿಚ್ಚ ಕ್ರಿಯೇಷನ್ಸ್‌ ಪ್ರಸ್ತುತಪಡಿಸುತ್ತಿದ್ದು, ಶಾಲಿನಿ ಆರ್ಟ್ಸ್‌ ಮುಖಾಂತರ ನಿರ್ಮಾಪಕ ಜಾಕ್‌ ಮಂಜು ಹಾಗೂ ಶಾಲಿನಿ ಮಂಜುನಾಥ್‌ ಅವರು ವಿತರಣೆ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ, ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರ ಸಲ್ಮಾನ್ ಖಾನ್ ಫಿಲ್ಮ್ಸ್(ಎಸ್‌ಕೆಎಫ್‌) ಈ ಸಿನಿಮಾವನ್ನು ಪ್ರಸ್ತುತಪಡಿಸಲಿದೆ. ಸಿನಿಮಾದ ಹಿಂದಿ ಅವತರಣಿಕೆಯನ್ನು ಪಿವಿಆರ್‌ ಪಿಕ್ಚರ್ಸ್‌ ವಿತರಣೆ ಮಾಡಲಿದೆ.

ಕೇರಳದಲ್ಲಿ ಖ್ಯಾತ ನಟ ದುಲ್ಕರ್‌ ಸಲ್ಮಾನ್‌ ತಮ್ಮ ವೇಫರರ್‌ ಫಿಲ್ಮ್ಸ್‌ ಡಿಸ್ಟ್ರಿಬ್ಯೂಷನ್ಸ್‌, ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಎಫ್‌ಸಿ ಡಿಸ್ಟ್ರಿಬ್ಯೂಟರ್ಸ್‌ ಮೂಲಕ ಕಾಸ್ಮೋಸ್‌ ಎಂಟರ್‌ಟೈನ್‌ಮೆಂಟ್ಸ್‌,ತಮಿಳುನಾಡಿನಲ್ಲಿ ಜೀ ಸ್ಟುಡಿಯೋ ವಿತರಣೆ ಮಾಡಲಿದೆ.ವಿದೇಶಗಳಲ್ಲಿ ‘ಒನ್‌ ಟ್ವೆಂಟಿ 8 ಮೀಡಿಯಾ’ ವಿತರಣೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT