ಸೋಮವಾರ, ಮಾರ್ಚ್ 20, 2023
25 °C

‘ಥ್ಯಾಂಕ್‌ಯೂ ಬೊಮ್ಮಾಯಿ ಮಾಮ’ ಎಂದ ಕಿಚ್ಚ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಸುದೀಪ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ‘ನಿಮಗೆ ಶುಭವಾಗಲಿ ಮಾಮ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದರು. 

ಇದೀಗ, ಮಂಗಳವಾರ (ಆ.31)ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿರುವ ನಟ ಸುದೀಪ್‌, ಸಿನಿಮಾ ಇಂಡಸ್ಟ್ರಿಯ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಸುದೀಪ್‌ ಅವರ ಜೊತೆಗಿರುವ ಫೋಟೊವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಬೊಮ್ಮಾಯಿ ಅವರು, ‘ಕನ್ನಡ ಸಿನಿಮಾದ ಸೂಪರ್‌ಸ್ಟಾರ್‌ ಕಿಚ್ಚ ಸುದೀಪ್‌ ಅವರನ್ನು ನನ್ನ ಕಚೇರಿಯಲ್ಲಿ ಭೇಟಿಯಾದೆ. ಎಂದಿನಂತೆ ಅವರ ಭೇಟಿ ಸಂತೋಷ ತಂದಿದೆ. ಪ್ರಸ್ತುತ ಚಿತ್ರರಂಗದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಅವರ ಮುಂದಿನ ಸಿನಿಮಾಗಳಿಗೆ ನನ್ನ ಶುಭಹಾರೈಕೆ’ ಎಂದಿದ್ದಾರೆ. ಈ ಟ್ವೀಟ್‌ ವೈರಲ್‌ ಆಗಿದ್ದು, ‘ಶೀಘ್ರದಲ್ಲೇ ಸಿನಿಮಾ ಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡಿ’ ಎಂದು ಮುಖ್ಯಮಂತ್ರಿ ಅವರಿಗೆ ಜನರು ಆಗ್ರಹಿಸಿದ್ದಾರೆ. 

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ನನ್ನನ್ನು ಭೇಟಿಯಾಗಿದ್ದಕ್ಕೆ ಥ್ಯಾಂಕ್‌ಯೂ ಬೊಮ್ಮಾಯಿ ಮಾಮ. ನನ್ನ ಶುಭಹಾರೈಕೆ ಎಂದಿನಂತೆ ಇರಲಿದೆ’ ಎಂದಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಟ್ವೀಟ್‌ ಮಾಡಿದ್ದ ಸುದೀಪ್‌, ‘ಬೊಮ್ಮಾಯಿ ಅವರ ಸರಳತೆಯನ್ನು ನೋಡಿಕೊಂಡು ನಾನು ಬೆಳೆದಿದ್ದೇನೆ. ವೈಯಕ್ತಿಕವಾಗಿ ನನ್ನ ವೃತ್ತಿ ಜೀವನದ ಆರಂಭದಲ್ಲಿ ಹೆಚ್ಚಿನ ಬೆಂಬಲ ನೀಡಿದವರು ಅವರು. ನಿಮಗೆ ಶುಭವಾಗಲಿ ಮಾಮ’ ಎಂದು ಉಲ್ಲೇಖಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು